alex Certify
ಕನ್ನಡ ದುನಿಯಾ       Mobile App
       

Kannada Duniya

ತರಗತಿಯಲ್ಲಿ ನಿದ್ದೆ ಮಾಡ್ತಿದ್ದ ಶಿಕ್ಷಕನ ಫೋಟೋ ತೆಗೆದಿದ್ದೇ ತಪ್ಪಾಯ್ತು…!

mahbubnagar-sleeping-teacher-ndtv_650x400_81501479123

ತೆಲಂಗಾಣದಲ್ಲಿ ತರಗತಿಯಲ್ಲಿ ನಿದ್ದೆ ಮಾಡ್ತಾ ಇದ್ದ ಶಿಕ್ಷಕನ ಫೋಟೋ ತೆಗೆದು ಶಿಕ್ಷಣ ಇಲಾಖೆಗೆ ಕಳಿಸಿದ ವಿದ್ಯಾರ್ಥಿ ಮೇಲೆ ಪೊಲೀಸರು ದೌರ್ಜನ್ಯವೆಸಗಿದ್ದಾರೆ. ಅವನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಮಹಬೂಬ್ ನಗರದಲ್ಲಿ ಈ ಘಟನೆ ನಡೆದಿದೆ.

ಗಣಿತ ಶಿಕ್ಷಕ ಕ್ಲಾಸ್ ರೂಮಿನಲ್ಲೇ ಕುರ್ಚಿಯಲ್ಲಿ ಕುಳಿತು ಗೊರಕೆ ಹೊಡೆಯುತ್ತಿದ್ದ. ವಿದ್ಯಾರ್ಥಿ ಇದನ್ನು ಫೋಟೋ ತೆಗೆದು ವಾಟ್ಸಾಪ್ ಮೂಲಕ ಜಿಲ್ಲಾ ಶಿಕ್ಷಣಾಧಿಕಾರಿಗೆ ಕಳಿಸಿದ್ದಾನೆ. ಶಿಕ್ಷಣಾಧಿಕಾರಿಗಳು ಆ ಶಿಕ್ಷಕನನ್ನು ಕರ್ತವ್ಯದಿಂದ ವಜಾ ಮಾಡಿದ್ರು.

ಇದು ಶಾಲೆಯ ಉಳಿದ ಶಿಕ್ಷಕರನ್ನು ಕೆರಳಿಸಿದೆ. ಅವರು ಪೊಲೀಸರ ಮೊರೆ ಹೋಗಿದ್ದಾರೆ. ಶಿಕ್ಷಕರ ಅಣತಿಯಂತೆ ಬಂದ ಇಬ್ಬರು ಪೇದೆಗಳು, ಸ್ನೇಹಿತನ ಜೊತೆ ಕುಳಿತು ಕೂಲ್ ಡ್ರಿಂಕ್ಸ್ ಕುಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದಿದ್ದಾರೆ. ಶಾಲೆಯ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.

ಬಾಲಕನ ಮೈತುಂಬಾ ಬರೆ ಬಂದಿತ್ತು. ಕೊನೆಗೆ ಹೇಗೋ ಆತ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಆದ್ರೆ ಪೊಲೀಸರು ಮಾತ್ರ ಬಾಲಕನನ್ನು ವಿನಾಕಾರಣ ಥಳಿಸಿಲ್ಲ, ಆತ ಶಾಲಾ ಆವರಣದಲ್ಲಿ ಮದ್ಯಪಾನ ಮಾಡುತ್ತಿದ್ದ ಅಂತಾ ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...