alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಯಾನ್ಸಿ ನಂಬರ್ ಗೆ ಸ್ಪೀಕರ್ ತೆತ್ತಿದ್ದು 30,000 ರೂಪಾಯಿ

madhusudanacharyತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ‘ವಾಸ್ತು ಕಾರಣ’ಕ್ಕೆ ಸರ್ಕಾರದ ಕೋಟ್ಯಾಂತರ ರೂ. ಗಳನ್ನು ವೆಚ್ಚ ಮಾಡುವ ಮೂಲಕ ಬೊಕ್ಕಸಕ್ಕೆ ಹೊರೆ ಮಾಡಿದ್ದಾರೆಂದು ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರು ಟೀಕೆ ಮಾಡಿದ್ದರು.

ಇದೀಗ ತೆಲಂಗಾಣ ವಿಧಾನಸಭಾ ಸ್ಪೀಕರ್ ಸರದಿ. ತಮ್ಮ ಖಾಸಗಿ ವಾಹನಕ್ಕೆ ಅದೃಷ್ಟ ಸಂಖ್ಯೆ ‘5555’ ಪಡೆಯಲು ಅವರು 30 ಸಾವಿರ ರೂಪಾಯಿಗಳನ್ನು ಸಾರಿಗೆ ಇಲಾಖೆಗೆ ಪಾವತಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ಸ್ವಂತ ಹಣವನ್ನು ನೀಡಿದ್ದಾರೆ.

ಸಾರಿಗೆ ಪ್ರಾಧಿಕಾರದ ನಿಯಮದ ಪ್ರಕಾರ ಫ್ಯಾನ್ಸಿ ನಂಬರ್ ಗಳನ್ನು ಹರಾಜು ಮಾಡಲಾಗುತ್ತದೆ. ಫ್ಯಾನ್ಸಿ ನಂಬರ್ ‘5555’ ಪಡೆಯಲು ತೆಲಂಗಾಣ ವಿಧಾನಸಭಾ ಸ್ಪೀಕರ್ ಮಧುಸೂದನಾಚಾರಿ ಅರ್ಜಿ ಸಲ್ಲಿಸಿದ್ದರು. ಇದೇ ನಂಬರ್ ಗಾಗಿ ಬೇರೆ ಯಾರೂ ಮುಂದೆ ಬಾರದ ಕಾರಣ ಹರಾಜಿನ ಮೂಲ ಬೆಲೆ 30 ಸಾವಿರ ರೂಪಾಯಿಗಳನ್ನು ಪಡೆದು ಮಧುಸೂದನಾಚಾರಿಯವರ ಕಾರಿಗೆ ‘5555’ ಸಂಖ್ಯೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...