alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ನೋಟಿನ ರಾಶಿ ಕಂಡು ದಾಳಿ ಮಾಡಿದವರೇ ದಂಗಾದರು

ap-tela

ಹೈದರಾಬಾದ್: ಆಂಧ್ರಪ್ರದೇಶ ಮತ್ತು ತೆಲಂಗಾಣ ಪೊಲೀಸರು ವಿವಿಧ ಕಡೆಗಳಲ್ಲಿ ದಾಳಿ ಮಾಡಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ 15 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ, ಕೋಟ್ಯಂತರ ರೂ ಮೌಲ್ಯದ ಹೊಸ ನೋಟು ವಶಕ್ಕೆ ಪಡೆದಿದ್ದಾರೆ.

ಹೈದರಾಬಾದ್ ನಾರಾಯಣಪುರ ಠಾಣೆ ಪೊಲೀಸರು, ಕಮಿಷನ್ ಪಡೆದು ನೋಟ್ ವಿನಿಮಯ ಮಾಡಿಕೊಡುತ್ತಿದ್ದ ಗ್ಯಾಂಗ್ ಒಂದನ್ನು ಬಂಧಿಸಿ, 95 ಲಕ್ಷ ರೂ. 2000 ರೂ ಮುಖಬೆಲೆಯ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ. ಮೇದಕ್ ಜಿಲ್ಲೆಯಲ್ಲಿ ದಾಳಿ ಮಾಡಿದ ಪೊಲೀಸರು, 10 ಲಕ್ಷ ರೂ. ಹೊಸ ನೋಟ್ ವಶಕ್ಕೆ ಪಡೆದಿದ್ದಾರೆ. ಆಂಧ್ರದ ಮೇಲೂರಿನಲ್ಲಿ ಮೂವರನ್ನು ಬಂಧಿಸಿ, 19 ಲಕ್ಷ ರೂ ಹೊಸ ನೋಟು ಜಪ್ತಿ ಮಾಡಲಾಗಿದೆ.

ತಿರುಪತಿಯಲ್ಲಿ ನೋಟ್ ವಿನಿಮಯ ಮಾಡುತ್ತಿದ್ದ ದಂಧೆಕೋರರನ್ನು ಬಂಧಿಸಿ, 1 ಕೋಟಿ ರೂ ಹೊಸ ನೋಟು ವಶಕ್ಕೆ ಪಡೆಯಲಾಗಿದೆ. ವಾರಂಗಲ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರಿಂದ 25 ಲಕ್ಷ ರೂ ಪಡೆದ ಖದೀಮರು ಹೊಸ ನಕಲಿ ನೋಟಿನ ಬಂಡಲ್ ಕೊಟ್ಟಿದ್ದು, ಮೋಸ ಹೋದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾನೆ.

ನೋಟ್ ಬ್ಯಾನ್ ಬಳಿಕ ಆಂಧ್ರದಲ್ಲಿ ಕಮಿಷನ್ ಆಧಾರದಲ್ಲಿ ಹೊಸ ನೋಟ್ ವಿನಿಮಯ ದಂಧೆ ಜೋರಾಗಿದ್ದು, ಪೊಲೀಸರ ದಾಳಿಯಲ್ಲಿ ಕೋಟ್ಯಂತರ ಹೊಸ ನೋಟ್ ಗಳು ಪತ್ತೆಯಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...