alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರನ ಹುಟ್ಟುಹಬ್ಬದಂದು ಪತ್ತೆಯಾಗ್ಬಹುದು ನಾಪತ್ತೆಯಾದ ತೇಜ್ ಪ್ರತಾಪ್

ಬೋಧ್ ಗಯಾ ಹೊಟೇಲ್ ನಿಂದ ನಾಪತ್ತೆಯಾಗಿರುವ ಲಾಲು ಪ್ರಸಾದ್ ಯಾದವ್ ಮಗ ತೇಜ್ ಪ್ರತಾಪ್ ಯಾದವ್ ಶುಕ್ರವಾರ ಎಲ್ಲರ ಮುಂದೆ ಬರುವ ಸಾಧ್ಯತೆಯಿದೆ. ಶುಕ್ರವಾರ ಅಂದ್ರೆ ನವೆಂಬರ್ 9 ರಂದು ತೇಜ್ ಪ್ರತಾಪ್ ಯಾದವ್ ಸಹೋದರ ತೇಜಸ್ವಿ ಯಾದವ್ ಹುಟ್ಟುಹಬ್ಬ.

ಸದ್ಯ ತೇಜಸ್ವಿ ಯಾದವ್ ದೆಹಲಿಯಲ್ಲಿದ್ದಾರೆ. ತೇಜ್ ಪ್ರತಾಪ್ ಯಾದವ್ ಮಥುರಾದಲ್ಲಿದ್ದಾರೆ ಎನ್ನಲಾಗ್ತಿದೆ. ಸಹೋದರನ ಹುಟ್ಟುಹಬ್ಬದಲ್ಲಿ ತೇಜ್ ಪ್ರತಾಪ್ ಪಾಲ್ಗೊಳ್ಳುತ್ತಾರೆಂಬ ನಿರೀಕ್ಷೆಯಿದೆ. ತೇಜ್ ಪ್ರತಾಪ್ ಯಾದವ್ ಸಹೋದರ ತೇಜಸ್ವಿಗೆ ತರುಣ್ ಎಂದು ಕರೆಯುತ್ತಾರೆ. ಒಟ್ಟಿಗಿರುತ್ತಿದ್ದ ತೇಜ್ ಪ್ರತಾಪ್ ಹಾಗೂ ತೇಜಸ್ವಿ ಈಗ ಬೇರೆಯಾಗಿದ್ದಾರೆ. ತೇಜ್ ಪ್ರತಾಪ್ ವಿಚ್ಛೇದನ ಇದಕ್ಕೆ ಕಾರಣ.

ತೇಜ್ ಪ್ರತಾಪ್ ಯಾದವ್ ಪತ್ನಿ ಐಶ್ವರ್ಯಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ. ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿಯಾಗಿದೆ. ಆದ್ರೆ ತೇಜ್ ಪ್ರತಾಪ್ ನಡೆ ಕುಟುಂಬಸ್ಥರಿಗೆ ಇಷ್ಟವಿಲ್ಲ. ಲಾಲು ಪ್ರಸಾದ್ ಯಾದವ್ ಕೂಡ ಇದನ್ನು ವಿರೋಧಿಸಿದ್ದಾರೆ. ಇದ್ರಿಂದ ಶಾಂತಿ ಕಳೆದುಕೊಂಡಿರುವ ತೇಜ್ ಪ್ರತಾಪ್ ಯಾದವ್ ಭದ್ರತಾ ಸಿಬ್ಬಂದಿಗೂ ತಿಳಿಯದಂತೆ ಹೊಟೇಲ್ ನಿಂದ ನಾಪತ್ತೆಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...