alex Certify
ಕನ್ನಡ ದುನಿಯಾ       Mobile App
       

Kannada Duniya

ಐದು ದಿನಗಳ ನಂತ್ರ ಪತ್ತೆಯಾದ ಲಾಲು ಪುತ್ರ ತೇಜ್ ಪ್ರತಾಪ್

ಆರ್.ಜೆ.ಡಿ. ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಐದು ದಿನಗಳ ನಂತ್ರ ಪತ್ತೆಯಾಗಿದ್ದಾರೆ. ವಿಚ್ಛೇದನ ವಿವಾದಕ್ಕೆ ಸಿಕ್ಕಿದ್ದ ತೇಜ್ ಪ್ರತಾಪ್ ಯಾದವ್ ಬೋಧ್ ಗಯಾ ಹೊಟೇಲ್ ನಿಂದ ನಾಪತ್ತೆಯಾಗಿದ್ದರು. ನಿರೀಕ್ಷೆಯಂತೆ ಸಹೋದರ ತೇಜಸ್ವಿ ಯಾದವ್ ಹುಟ್ಟುಹಬ್ಬಕ್ಕೆ ತೇಜ್ ಪ್ರತಾಪ್ ಯಾದವ್ ಹಾಜರ್ ಆಗಿದ್ದಾರೆ.

ತೇಜ್ ಪ್ರತಾಪ್ ಯಾದವ್ ಐದು ದಿನ ಎಲ್ಲಿದ್ದರು ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ಇಂದು ಸಹೋದರ ತೇಜಸ್ವಿಯ 29ನೇ ವರ್ಷದ ಹುಟ್ಟುಹಬ್ಬ. ಅವ್ರಿಗೆ ಆಶೀರ್ವಾದ ನೀಡಲು ದೆಹಲಿಗೆ ಬಂದಿದ್ದೇನೆ. ನಾನು ಎಲ್ಲಿಯೂ ನಾಪತ್ತೆಯಾಗಿಲ್ಲ. ಕುಟುಂಬಸ್ಥರ ಜೊತೆ ಸದಾ ಸಂಪರ್ಕದಲ್ಲಿದ್ದೆ ಎಂದು ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ. ಆದ್ರೆ ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ.

ಮದುವೆಯಾಗಿ 5 ತಿಂಗಳಲ್ಲಿಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ತೇಜ್ ಪ್ರತಾಪ್ ಯಾದವ್ ಕುಟುಂಬಸ್ಥರ ಕೋಪಕ್ಕೆ ಕಾರಣವಾಗಿದ್ದಾರೆ. ಲಾಲು ಪ್ರಸಾದ್ ಸೇರಿದಂತೆ ಕುಟುಂಬಸ್ಥರೆಲ್ಲ ಐಶ್ವರ್ಯಗೆ ವಿಚ್ಛೇದನ ನೀಡದಂತೆ ಮನವಿ ಮಾಡಿದ್ದಾರೆ. ಆದ್ರೆ ಇದಕ್ಕೆ ತೇಜ್ ಪ್ರತಾಪ್ ಯಾದವ್ ನಿರಾಕರಿಸಿದ್ದಾರೆ ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...