alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಛೇದನಕ್ಕೆ ಒಪ್ಪಿದ್ರೆ ಮನೆಗೆ ಹೋಗ್ತಾರಂತೆ ತೇಜ್ ಪ್ರತಾಪ್

ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಜಿದ್ದಿಗೆ ಬಿದ್ದಿದ್ದಾರೆ. ಸದ್ಯ ಹರಿದ್ವಾರದಲ್ಲಿ ವಾಸವಾಗಿರುವ ತೇಜ್ ಪ್ರತಾಪ್ ಯಾದವ್, ಮನೆಗೆ ವಾಪಸ್ ಆಗಲು ಷರತ್ತು ಹಾಕಿದ್ದಾರೆ. ವಿಚ್ಛೇದನ ನಿರ್ಧಾರವನ್ನು ಅವ್ರು ಸ್ವೀಕರಿಸಿದ್ರೆ ಮಾತ್ರ ಮನೆಗೆ ವಾಪಸ್ ಬರ್ತೇನೆ ಎಂದು ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ.

ಪಾಟ್ನಾದ  ವಾರ್ತಾ ಚಾನೆಲ್ ಒಂದರ ಜೊತೆ ಫೋನ್ ನಲ್ಲಿ ಮಾತನಾಡಿದ ತೇಜ್ ಪ್ರತಾಪ್ ಯಾದವ್, ಸಹೋದರನಿಗೆ ಹುಟ್ಟುಹಬ್ಬದ ಶುಭ ಕೋರಿದ್ದೇನೆ. ಆದ್ರೆ ದೆಹಲಿಗೆ ಭೇಟಿ ನೀಡಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲವೆಂದು ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ. ತೇಜ್ ಪ್ರತಾಪ್ ಯಾದವ್ ಮಾಧ್ಯಮಗಳ ಮುಂದೆ ಬರದೆ ಐದು ದಿನ ಕಳೆದಿದೆ. ಬೋಧ್ ಗಯಾದಲ್ಲಿ ತೇಜ್ ಪ್ರತಾಪ್ ಯಾದವ್ ಅವ್ರನ್ನು ನೋಡಿದ್ದೇ ಕೊನೆ. ನಂತ್ರ ತೇಜ್ ಪ್ರತಾಪ್ ಕಣ್ಣಿಗೆ ಕಾಣಿಸಲಿಲ್ಲ.

ನಾನು ನಾಪತ್ತೆಯಾಗಿಲ್ಲ. ಫೋನ್ ನಲ್ಲಿ ಕುಟುಂಬಸ್ಥರ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ. ಐಶ್ವರ್ಯಗೆ ವಿಚ್ಛೇದನ ನೀಡಲು ಕುಟುಂಬಸ್ಥರು ಒಪ್ಪುತ್ತಿಲ್ಲ. ನನ್ನ ನಿರ್ಧಾರಕ್ಕೆ ಬೆಂಬಲ ನೀಡಿದ್ರೆ ಮಾತ್ರ ನಾನು ಮನೆಗೆ ಹೋಗ್ತೇನೆಂದು ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...