alex Certify
ಕನ್ನಡ ದುನಿಯಾ       Mobile App
       

Kannada Duniya

‘ರಿಯಾಲಿಟಿ ಷೋ’ ನಲ್ಲಿ ಪಾಲ್ಗೊಳ್ಳಲು ಇಬ್ಬರ ಹತ್ಯೆ ಮಾಡಿರುವ ಅಪ್ರಾಪ್ತ

04juvie

ನವದೆಹಲಿ: ಡ್ಯಾನ್ಸಿಂಗ್ ರಿಯಾಲಿಟಿ ಷೋ ನಲ್ಲಿ ಪಾಲ್ಗೊಳ್ಳುವ ಸಲುವಾಗಿ ತನ್ನ ಗೆಳತಿಯೊಂದಿಗೆ ಸೇರಿ ಬಾಲಕನೊಬ್ಬನನ್ನು ಅಪಹರಿಸಿ, ಹತ್ಯೆ ಮಾಡಿ ರಿಮ್ಯಾಂಡ್ ಹೋಂ ಗೆ ಹೋಗಿದ್ದ ಅಪ್ರಾಪ್ತನೊಬ್ಬ ಬಿಡುಗಡೆಗೊಂಡ ಎರಡು ತಿಂಗಳಿನಲ್ಲೇ ಮತ್ತೊಂದು ಹತ್ಯೆ ಮಾಡಿ ಸಿಕ್ಕಿ ಬಿದ್ದಿದ್ದಾನೆ.

ಕಳೆದ ಸೆಪ್ಟೆಂಬರ್ ನಲ್ಲಿ 13 ವರ್ಷದ ಬಾಲಕನನ್ನು ಅಪಹರಿಸಿದ್ದ ಈ ಅಪ್ರಾಪ್ತ, ಬಾಲಕನ ತಂದೆಯಿಂದ 60 ಸಾವಿರ ರೂ. ಒತ್ತೆ ಹಣ ನೀಡಲು ಡಿಮ್ಯಾಂಡ್ ಮಾಡಿದ್ದ. ಹಣ ಸಿಗದಿದ್ದಾಗ ಬಾಲಕನನ್ನು ಹತ್ಯೆ ಮಾಡಿದ್ದು, ಸಿಕ್ಕಿ ಬಿದ್ದ ವೇಳೆ ತಾನೂ ಹಾಗೂ ತನ್ನ ಗೆಳತಿ ಡ್ಯಾನ್ಸಿಂಗ್ ರಿಯಾಲಿಟಿ ಷೋ ನಲ್ಲಿ ಭಾಗವಹಿಸಲು ಬಯಸಿದ್ದು, ಹಣದ ಅವಶ್ಯಕತೆ ಇದ್ದ ಕಾರಣ ಈ ಅಪಹರಣ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಬಳಿಕ ಅಪ್ರಾಪ್ತನನ್ನು ರಿಮ್ಯಾಂಡ್ ಹೋಂ ಗೆ ಕಳುಹಿಸಲಾಗಿತ್ತು.

ಎರಡು ತಿಂಗಳ ಹಿಂದಷ್ಟೇ ರಿಮ್ಯಾಂಡ್ ಹೋಂ ನಿಂದ ಬಿಡುಗಡೆಗೊಂಡಿದ್ದ ಅಪ್ರಾಪ್ತ, ಜನವರಿ 31 ರಂದು ದಕ್ಷಿಣ ದೆಹಲಿಯ ಲೋಧಿ ಕಾಲೋನಿಯಲ್ಲಿ ಒಬ್ಬಂಟಿಯಾಗಿದ್ದ 65 ವರ್ಷದ ವೃದ್ದೆಯೊಬ್ಬರನ್ನು ಹತ್ಯೆ ಮಾಡಿ ನಗದು, ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ಗಳನ್ನು ದೋಚಿದ್ದಾನೆ. ಕಳುವಾಗಿದ್ದ ಮೊಬೈಲ್ ಫೋನ್ ಟ್ರೇಸ್ ಮಾಡಿದ ಪೊಲೀಸರು ಇದೀಗ ಅಪ್ರಾಪ್ತನನ್ನು ಬಂಧಿಸಿ ಮತ್ತೇ ರಿಮ್ಯಾಂಡ್ ಹೋಂಗೆ ಅಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...