alex Certify
ಕನ್ನಡ ದುನಿಯಾ       Mobile App
       

Kannada Duniya

ಒಡಿಶಾದ ಈ ಯುವಕ ಮಾಡಿದ್ದಾನೆ ಪ್ರಳಯಾಂತಕ ಕೆಲಸ

security 346ಒಡಿಶಾದ 19 ವರ್ಷದ ಯುವಕನೊಬ್ಬ ಪ್ರಳಯಾಂತಕ ಕೆಲಸ ಮಾಡಿದ್ದಾನೆ. ಹೈದರಾಬಾದ್ ಮೂಲದ ಕಂಪನಿಯೊಂದರ ಟೋಲ್ ಫ್ರೀ ಸಂಖ್ಯೆಯ ಫೋನ್ ನಂಬರ್ ಹ್ಯಾಕ್ ಮಾಡಿ ಕಂಪನಿಗೆ ಸುಮಾರು 60 ಲಕ್ಷ ರೂಪಾಯಿಗಳಷ್ಟು ನಷ್ಟ ಉಂಟು ಮಾಡಿದ ಕಾರಣ ಈಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ.

ಒಡಿಶಾದ ಬಲಸೋರೆಯ ಶಿವಪುರ ಗ್ರಾಮದ ಹಿಮಾಲಯ ಮೊಹಾಂತಿ ಈ ಕೃತ್ಯವೆಸಗಿದವನಾಗಿದ್ದು, ಕೆಲ ಕೋಡ್ ನಿಂದ ಟೋಲ್ ಫ್ರೀ ನಂಬರ್ ಅನ್ನು ಹ್ಯಾಕ್ ಮಾಡಿದ್ದಲ್ಲದೇ ಅದನ್ನು ತನ್ನ ಮೊಬೈಲ್ ನಿಂದ ಉಚಿತ ಕರೆ ಮಾಡಲು ಬಳಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ತನ್ನ ಹಲವು ಸ್ನೇಹಿತರಿಗೂ ಈ ಸೌಲಭ್ಯ ಒದಗಿಸಿದ್ದಾನೆ.

ಕಳೆದ ನವೆಂಬರ್ ನಲ್ಲಿ ಹ್ಯಾಕ್ ಆಗಿದೆ ಎನ್ನಲಾಗಿದ್ದು, ಟೋಲ್ ಫ್ರೀ ನಂಬರ್ ಗಾಗಿ ಕಂಪನಿಗೆ ಪ್ರತಿ ತಿಂಗಳು 1 ಲಕ್ಷ ರೂ. ಬಿಲ್ ಬರುತ್ತಿತ್ತೆನ್ನಲಾಗಿದೆ. ಇದರಲ್ಲಿ ಒಮ್ಮೆಲೇ ಯದ್ವಾತದ್ವಾ ಏರಿಕೆಯಾಗಿದೆ. ಇದರಿಂದ ಕಂಗಾಲಾದ ಕಂಪನಿಯವರು ಕೊನೆಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ ವೇಳೆ ಹಿಮಾಲಯ ಮೊಹಂತಿ ಹ್ಯಾಕ್ ಮಾಡಿರುವುದು ಗೊತ್ತಾಗಿದೆ. ಆತನನ್ನು ಬಂಧಿಸಿ ಈಗ ಜೈಲಿಗೆ ಕಳುಹಿಸಲಾಗಿದೆ. ವಿಚಾರಣೆ ವೇಳೆ ಮೊಹಾಂತಿ, ಹಲವು ಹ್ಯಾಕಿಂಗ್ ಗ್ರೂಪ್ ಗಳ ಸದಸ್ಯನಾಗಿರುವುದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...