alex Certify
ಕನ್ನಡ ದುನಿಯಾ       Mobile App
       

Kannada Duniya

ದಿಢೀರ್ ದುಡ್ಡು ಮಾಡಲು ಮಗು ಕಿಡ್ನಾಪ್ ಮಾಡಿದ್ದಳು ಕಾಲೇಜು ವಿದ್ಯಾರ್ಥಿನಿ

ಸುಲಭದಲ್ಲಿ ಕೋಟಿಗಟ್ಟಲೆ ದುಡ್ಡು ಮಾಡಬೇಕೆಂದು ಪ್ಲಾನ್ ಮಾಡಿ ಬಾಲಕನೊಬ್ಬನನ್ನು ಕಿಡ್ನಾಪ್ ಮಾಡಿದ ಅಕ್ಕ ಮತ್ತು ತಮ್ಮ ಕೃತ್ಯ ನಡೆಸಿದ ಕೆಲವೇ ಗಂಟೆಗಳಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ. ಇದು ನಡೆದದ್ದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ.

ದೆಹಲಿ ವಿವಿಯ ಫಸ್ಟ್ ಬಿಕಾಂ ವಿದ್ಯಾರ್ಥಿನಿ ರಿಯಾ ಎಂಬವಳು ಈ ಖತರ್ನಾಕ್ ಪ್ಲಾನ್ ನ ಮಾಸ್ಚರ್ ಮೈಂಡ್. ಇನ್ನೂ ಸರಿಯಾಗಿ ಪ್ರಪಂಚವನ್ನೇ ನೋಡಿರದ ಹದಿಹರೆಯದ ತಮ್ಮನ ಸಹಾಯದಿಂದ ಈಕೆ ದಕ್ಷಿಣ ದೆಹಲಿಯ ಶ್ರೀಮಂತರೊಬ್ಬರ 3 ವರ್ಷದ ಮಗುವನ್ನು ಕಿಡ್ನಾಪ್ ಮಾಡಿದಳು. ಗುರುವಾರ ಸಂಜೆ ಗಿಟೋರ್ನಿಯಲ್ಲಿರುವ ತನ್ನ ಮನೆಯ ಅಂಗಳದಲ್ಲೇ ಆಡುತ್ತಿದ್ದ ಆ ಮಗುವನ್ನು ಕಿಡ್ನಾಪ್ ಮಾಡಿ ಅದೇ ಏರಿಯಾದ ಕೋಣೆಯೊಂದರಲ್ಲಿ ಬಚ್ಚಿಟ್ಟಳು.

ಇದಾದ ಬಳಿಕ ಮಗುವಿನ ತಂದೆಗೆ ವಾಟ್ಸಾಪ್ ಸಂದೇಶ ಕಳಿಸಿದ ಆಕೆ, ಮಗು ಜೀವಂತ ಬೇಕೆಂದರೆ 5 ಕೋಟಿ ರೂ. ತರುವಂತೆ ಬೇಡಿಕೆ ಮುಂದಿಟ್ಟಳು. ಬಹಳ ಹೊತ್ತಿನ ಚೌಕಾಶಿ ಬಳಿಕ ಮಗುವಿನ ತಂದೆ 48 ಲಕ್ಷ ರೂ. ನೀಡಲು ಒಪ್ಪಿಕೊಂಡಿದ್ದ. ಆದರೆ ಅದಾಗಲೇ ಕಿಡ್ನಾಪ್ ಮಾಡಿದ ಹುಡುಗಿಯ ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿದ ಪೊಲೀಸರು ತಲುಪಬೇಕಾಗಿದ್ದ ಸ್ಥಳ ತಲುಪಿಯಾಗಿತ್ತು.

ಮಗು ಸುರಕ್ಷಿತವಾಗಿ ಹೆತ್ತವರ ಮಡಿಲು ಸೇರಿದೆ. ಕಿಡ್ನಾಪ್ ಆದ ಕೆಲವೇ ಗಂಟೆಗಳಲ್ಲಿ ಅಪರಾಧಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾದ ದೆಹಲಿ ಪೊಲೀಸರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...