alex Certify
ಕನ್ನಡ ದುನಿಯಾ       Mobile App
       

Kannada Duniya

ವೈದ್ಯನಂತೆ ಪೋಸು ಕೊಟ್ಟು ಬಾಲಕನ ಪ್ರಾಣ ತೆಗೆದ ಎಸಿ ಮೆಕ್ಯಾನಿಕ್

ವೈದ್ಯನೆಂದು ಸುಳ್ಳು ಹೇಳಿ ಬಾಲಕನ ಸಾವಿಗೆ ಕಾರಣನಾದ ಎಸಿ ಮೆಕ್ಯಾನಿಕ್ ಒಬ್ಬನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಅರಿಜಿತ್ ದಾಸ್ ಎಂಬ ಬಾಲಕನನ್ನು ಬರ್ದ್ವಾನ್ ನಿಂದ ಕೋಲ್ಕತ್ತಾದ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. ಅನ್ನಪೂರ್ಣ ನರ್ಸಿಂಗ್ ಹೋಮ್ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿತ್ತು.

ವೈದ್ಯನೆಂದು ಹೇಳಿ ಎಸಿ ಮೆಕ್ಯಾನಿಕ್ ಸರ್ಫರಾಜ್ ಉದ್ದೀನ್ ನನ್ನು ಕಳಿಸಿಕೊಟ್ಟಿತ್ತು. ಅವನಿಗೆ ಆಕ್ಸಿಜನ್ ಮಾಸ್ಕ್ ಅಳವಡಿಸೋದು ಕೂಡ ಗೊತ್ತಿರಲಿಲ್ಲ. ಆಂಬ್ಯುಲೆನ್ಸ್ ನಲ್ಲಿ ಬಾಲಕನಿಗೆ ಆಕ್ಸಿಜನ್ ಮಾಸ್ಕ್ ಅಳವಡಿಸದೇ ಇದ್ದಿದ್ರಿಂದ ಕೋಲ್ಕತ್ತಾ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ.

ಆಂಬ್ಯುಲೆನ್ಸ್ ಗಾಗಿ ಆಸ್ಪತ್ರೆಯವರು ಬಾಲಕನ ತಂದೆಯ ಬಳಿ 16,000 ರೂಪಾಯಿ ಪಡೆದಿದ್ರು. ಡಾಕ್ಟರ್ ನಂತೆ ಪೋಸು ಕೊಡ್ತಿದ್ದ ಎಸಿ ಮೆಕ್ಯಾನಿಕ್ 8000 ರೂಪಾಯಿ ತೆಗೆದುಕೊಂಡಿದ್ದ. ಆದ್ರೆ ಆಂಬ್ಯುಲೆನ್ಸ್ ನಲ್ಲಿ ಬಾಲಕನ ತಂದೆಯನ್ನು ಕರೆದೊಯ್ದಿರಲಿಲ್ಲ. ಬೇರೆ ವಾಹನದಲ್ಲಿ ಬರುವಂತೆ ಸೂಚಿಸಿದ್ದ. ಸದ್ಯ ಪೊಲೀಸರು ಸರ್ಫರಾಜ್ ನನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...