alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯ್ ಫ್ರೆಂಡ್ ಜತೆ ಸುತ್ತಾಡಿ, ಶಿಕ್ಷಕನ ಮೇಲೆ ದೂರು ಹೇಳಿದ್ಲು ಯುವತಿ

ಗಾಜಿಯಾಬಾದ್ ನ ಯುವಕನೊಬ್ಬ ಫೇಸ್ಬುಕ್ ಮೂಲಕ ಪರಿಚಯವಾದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪವನ್ನು ಎದುರಿಸ್ತಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಕ್ಕೊಳಗಾದ ಯುವತಿ ತನ್ನ ಕೋಚಿಂಗ್ ಸೆಂಟರ್ ಶಿಕ್ಷಕರ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ ವಿಚಿತ್ರ ಪ್ರಕರಣ ದಾಖಲಾಗಿದೆ.

ಸೋಮವಾರದಂದು ಕೋಚಿಂಗ್ ಸೆಂಟರ್ ಗೆ ಹೋಗುತ್ತೇನೆ ಅಂತ ಮನೆಯಿಂದ ಹೊರಟ ಯುವತಿ ತಡರಾತ್ರಿಯಾದ್ರೂ ಮನೆಗೆ ಬರಲಿಲ್ಲ. ಆನಂತರ ಮನೆಗೆ ಬಂದ ಯುವತಿಯನ್ನು ಮನೆಯವರು ವಿಚಾರಿಸಿದಾಗ ಆಕೆ ತನ್ನ ಮೇಲೆ ಶಿಕ್ಷಕರು ಅತ್ಯಾಚಾರ ನಡೆಸಿದ್ದಾರೆ ಅಂತ ಹೇಳಿದ್ಲು.

ಈ ಸಂಬಂಧ ಯುವತಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿ ಶಿಕ್ಷಕರನ್ನು ವಿಚಾರಣೆ ನಡೆಸಿದಾಗ ಅವರು ಯುವತಿಯ ಆರೋಪವನ್ನು ಅಲ್ಲಗಳೆದರು. ಸಿಸಿ ಟಿವಿ ಫುಟೇಜ್ ಚೆಕ್ ಮಾಡಿದಾಗ ಕೂಡ ಅಂದು ಯುವತಿ ಕೋಚಿಂಗ್ ಕ್ಲಾಸ್ ಗೆ ಬಂದೇ ಇಲ್ಲ ಅನ್ನೋದು ಗೊತ್ತಾಗಿದೆ.

ಈ ಬಗ್ಗೆ ಯುವತಿಯನ್ನು ವಿಚಾರಿಸಿದಾಗ ಆಕೆ ಫೇಸ್ಬುಕ್ ಮೂಲಕ ಪರಿಚಯವಾದ ಯುವಕ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಅನ್ನೋ ವಿಚಾರವನ್ನ ಒಪ್ಪಿಕೊಳ್ತಾಳೆ. ಆ ಯುವಕ ಕೂಡ ಘಟನೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಸಿಟಿ ಟಿವಿಯಲ್ಲಿ ಆಕೆ ಯುವಕನೊಂದಿಗೆ ಓಡಾಡುತ್ತಿರುವ ದೃಶ್ಯಗಳು ಕೂಡ ಪತ್ತೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...