alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಪ್ರದೇಶದಲ್ಲಿ ನಡೆದಿದೆ ಮತ್ತೊಂದು ಪೈಶಾಚಿಕ ಕೃತ್ಯ

ಉತ್ತರ ಪ್ರದೇಶದಲ್ಲಿ 18 ವರ್ಷದ ಯುವತಿಯೊಬ್ಬಳನ್ನು ಸಜೀವ ದಹನ ಮಾಡಲಾಗಿದೆ. ಉನ್ನಾವ್ ಜಿಲ್ಲೆಯ ಗ್ರಾಮವೊಂದರ ಹೊರಭಾಗದಲ್ಲಿ ಸುಟ್ಟು ಕರಕಲಾಗಿರೋ ಶವ ಪತ್ತೆಯಾಗಿದೆ.

ಸೈಕಲ್ ತೆಗೆದುಕೊಂಡು ಆಕೆ ಮಾರ್ಕೆಟ್ ಗೆ ಹೊರಟಿದ್ಲು. ಮಾರ್ಗಮಧ್ಯೆ ಯಾರೋ ಅಟ್ಯಾಕ್ ಮಾಡಿ ಹತ್ಯೆ ಮಾಡಿದ್ದಾರೆ ಅಂತಾ ಹೇಳಲಾಗ್ತಿದೆ. ಯುವತಿಯ ಮೃತದೇಹದ ಪಕ್ಕದಲ್ಲೇ ಖಾಲಿ ಕ್ಯಾನ್ ಬಿದ್ದುಕೊಂಡಿತ್ತು. ಬೆಂಕಿಕಡ್ಡಿಗಳು ಕೂಡ ಸಿಕ್ಕಿವೆ. ಸಮೀಪದಲ್ಲೇ ಅವಳ ಸೈಕಲ್ ಕೂಡ ಅನಾಥವಾಗಿ ಬಿದ್ದಿತ್ತು.

ಮಧ್ಯಾಹ್ನ 4.30ಕ್ಕೆ ಆಕೆ ತರಕಾರಿ ತರಲೆಂದು ಮನೆಯಿಂದ ಹೊರಟಿದ್ದಾಳೆ. ಅದಾಗಿ ಸ್ವಲ್ಪ ಹೊತ್ತಿನಲ್ಲೇ ಅವಳ ಕೊಲೆಯ ಸುದ್ದಿ ಗ್ರಾಮದಲ್ಲಿ ಹಬ್ಬಿತ್ತು. ಆಘಾತಗೊಂಡ ಮನೆಯವರು ಸ್ಥಳಕ್ಕೆ ಧಾವಿಸಿ ಬಂದ್ರು. ಆದ್ರೆ ಯುವತಿಯ ದೇಹ ಶೇ.100ರಷ್ಟು ಸುಟ್ಟು ಹೋಗಿತ್ತು. ಕೊಲೆಗಾರರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಅಂತಾ ಪೊಲೀಸರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...