alex Certify
ಕನ್ನಡ ದುನಿಯಾ       Mobile App
       

Kannada Duniya

ನೀವು ನೋಡಿದ್ರಾ ಈ ಹೈಟೆಕ್ ಲಂಬೋಧರನಾ…?

ಭಾರತದಲ್ಲಿ ಸದ್ಯ ಗಣೇಶ ಉತ್ಸವದ ಸಡಗರ ಮನೆ ಮಾಡಿದೆ. ಇನ್ನು ಮಹಾರಾಷ್ಟ್ರದ ನಾಡ ಹಬ್ಬ, ದೇಶವಾಸಿಗಳನ್ನು ತನ್ನತ್ತ ಸೆಳೆಯುತ್ತಿದೆ. ದೊಡ್ಡ ದೊಡ್ಡ ಮೂರ್ತಿಗಳು, ಅದರ ಅಲಂಕಾರ, ಪೆಂಡಾಲ್ ನೋಡಿ ಜನ ಖುಷ್ ಆಗಿದ್ದಾರೆ. ಇನ್ನು ಹಳೆಯ ಆಚರಣೆಗೆ ಹೊಸ ಟಚ್ ನೀಡಿದ್ರೆ ಹೇಗೆ ಇರುತ್ತದೆ ಊಹಿಸಿಕೊಳ್ಳಿ. ಹೌದು, ಮಹಾರಾಷ್ಟ್ರದಲ್ಲಿ ಸ್ಥಾಪಿತ ಸಾರ್ವಜನಿಕ ಗಣೇಶ ಉತ್ಸವಕ್ಕೆ ಹೈಟೆಕ್ ಸ್ಪರ್ಶ ಸಿಕ್ಕಿದೆ.

ಮುಂಬೈನ ಲಾಲ್ ಬಾಗ್ ನಲ್ಲಿ ಈ ಬಾರಿ ಪ್ರತಿಷ್ಠಾಲಿಸಿರುವ ಗಣಪತಿ, ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಈ ಬಾರಿ ಲಾಲ್ ಬಾಗ್ ಗಣಪನಿಗೆ ರೋಬೋಟ್ ಪೂಜಾ ಭಾಗ್ಯ ಲಭಿಸಿದೆ. ಅಲ್ ಸ್ಟ್ರುಟ್ ಟೆಕ್ನಾಲಜೀಸ್ ಸಂಸ್ಥೆ ಈ ರೋಬೋಟ್ ನಿರ್ಮಾಣ ಮಾಡಿದೆ. ರೋಬೋಟ್ ಗಣೇಶನಿಗೆ ಆರತಿ ಮಾಡುತ್ತಿರುವ ದೃಶ್ಯ ಭಕ್ತ ಸಮೂಹವನ್ನು ಆಕರ್ಷಿಸಿದೆ.

ಗಣಪನ ಪೂಜೆಗೆ ರೋಬೋಟ್ ಬಳಸಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಈ ರೀತಿ ಪ್ರಯತ್ನಗಳು ನಡೆದಿದ್ದವು. ತಂತ್ರಜ್ಞಾನ ಬೆಳೆದ ಹಾಗೆ ಪೂಜೆಯಲ್ಲಿ ವೈವಿಧ್ಯತೆ ಕಾಣಲಾಗುತ್ತಿದೆ. ಇನ್ನು ಗಣಪನ ಕೂರಿಸುವ ಪೆಂಡಾಲ್ ಗಳು ವಿವಿಧ ಕಲೆಯ ಮಜಲುಗಳನ್ನು ಭಕ್ತರಿಗೆ ಪರಿಚಯಿಸಿದ್ದಂತೂ ಸುಳ್ಳಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...