alex Certify
ಕನ್ನಡ ದುನಿಯಾ       Mobile App
       

Kannada Duniya

ಗೃಹಿಣಿ ಸಾವಿಗೆ ಕಾರಣವಾಯ್ತು ವೀಸಾ ನಿರಾಕರಣೆ

h-1b-visa_65ಅಮೆರಿಕಾ ಅಧ್ಯಕ್ಷರಾಗಿ ಡೋನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಹೆಚ್ 1 ಬಿ ವೀಸಾ ನೀಡುವುದಕ್ಕೆ ಹಲವು ಕಠಿಣ ನಿರ್ಬಂಧಗಳನ್ನು ವಿಧಿಸಿದ್ದಾರೆ. ಇದು ಭಾರತೀಯ ಐಟಿ ಕಂಪನಿಗಳ ಮೇಲೆ ಪರಿಣಾಮ ಬೀರಿದ್ದು, ಜೊತೆಗೆ ಅಮೆರಿಕಾದಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯ ಟೆಕ್ಕಿಗಳೂ ತೊಂದರೆ ಅನುಭವಿಸುವಂತಾಗಿದೆ.

ಹೆಚ್ 1 ಬಿ ವೀಸಾ ನಿರಾಕರಿಸಿದ ಪರಿಣಾಮ ಕಳೆದ ಎಂಟು ವರ್ಷಗಳಿಂದ ಬ್ಯಾಂಕ್ ಆಫ್ ಅಮೆರಿಕಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಟೆಕ್ಕಿ ಕುಟುಂಬವೊಂದು ಅನಿವಾರ್ಯವಾಗಿ ಭಾರತಕ್ಕೆ ಮರಳುವಂತಾಗಿದ್ದು, ಇದರಿಂದ ಖಿನ್ನತೆಗೊಳಗಾದ ಟೆಕ್ಕಿ ಪತ್ನಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಸಂಜಯ್ ಶರ್ಮಾ ಎಂಬವರ ಪತ್ನಿ 39 ವರ್ಷದ ರಶ್ಮಿ ಶರ್ಮಾ ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ಇತ್ತೀಚೆಗಷ್ಟೇ ಭಾರತಕ್ಕೆ ಮರಳಿದ್ದ ಈ ಕುಟುಂಬ ಪಪ್ಪುಲಗೂಡಾದ ಪ್ರತಿಷ್ಟಿತ ಅಲ್ಕಾಪುರಿ ಕಾಲೋನಿಯಲ್ಲಿ ವಾಸವಾಗಿತ್ತು. ಸಂಜಯ್ ಶರ್ಮಾ ತಮ್ಮ ಇಬ್ಬರು ಮಕ್ಕಳೊಂದಿಗೆ ಲ್ಯಾಪ್ ಟಾಪ್ ರಿಪೇರಿ ಮಾಡಿಸಿಕೊಂಡು ಬರಲು ತೆರಳಿದ್ದ ಸಮಯದಲ್ಲಿ ರಶ್ಮಿ ಶರ್ಮಾ ನೇಣಿಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಂಪತಿಗಳು ಅನ್ಯೋನ್ಯತೆಯಿಂದ ಇದ್ದು, ಹೆಚ್ 1 ಬಿ ವೀಸಾ ನಿರಾಕರಣೆಯಿಂದ ಖಿನ್ನತೆಗೊಳಗಾಗಿದ್ದ ರಶ್ಮಿ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...