alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ಫೇಸ್ ಬುಕ್ ಮೂಲಕ ಟೆಕ್ಕಿ ಮಾಡುತ್ತಿದ್ದ ಹೀನ ಕೃತ್ಯ

sai shantan

ತನ್ನನ್ನು ಪ್ರೀತಿಸಲು ನಿರಾಕರಿಸಿದ್ದ ಯುವತಿಯ ಹೆಸರಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ 10 ಕ್ಕೂ ಹೆಚ್ಚು ನಕಲಿ ಅಕೌಂಟ್ ತೆರೆದಿದ್ದ ಟೆಕ್ಕಿಯೊಬ್ಬ ಅದರಲ್ಲಿ ಆಕೆಯನ್ನು ಕಾಲ್ ಗರ್ಲ್ ಎಂಬಂತೆ ಬಿಂಬಿಸಿದ್ದು, ಯುವತಿ ನೀಡಿದ ದೂರಿನ ಮೇರೆಗೆ ಇದೀಗ ಅರೆಸ್ಟ್ ಆಗಿದ್ದಾನೆ.

ಹೈದರಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಟೆಕ್ಕಿ ಸಾಯಿ ಶಾಂತನ್ ಎಂಬಾತ ತನ್ನ ಸಹಪಾಠಿಯಾಗಿದ್ದ ಯುವತಿಗೆ ಪ್ರೀತಿಸುವಂತೆ ಗಂಟು ಬಿದ್ದಿದ್ದ. ಆಕೆ ಇದನ್ನು ನಿರಾಕರಿಸಿದ್ದಲ್ಲದೇ ಆತನ ಭೇಟಿಯನ್ನು ಅದಷ್ಟು ಕಡಿಮೆ ಮಾಡತೊಡಗಿದ್ದಾಳೆ. ಇದರಿಂದ ರೊಚ್ಚಿಗೆದ್ದ ಸಾಯಿ ಶಾಂತನ್ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ.

ಯುವತಿಯ ಹೆಸರಿನಲ್ಲಿ ನಕಲಿ ಅಕೌಂಟ್ ಗಳನ್ನು ತೆರೆದು ಅದರಲ್ಲಿ ತಾವಿಬ್ಬರು ಹಿಂದೆ ಅತ್ಮೀಯರಾಗಿದ್ದ ಸಂದರ್ಭದಲ್ಲಿ ಕದ್ದು ತೆಗೆದಿದ್ದ ಆನೇಕ ಫೋಟೋಗಳನ್ನು ಹಾಕಿದ್ದಾನೆ. ಜೊತೆಗೆ ಆಕೆಯ ಫೋನ್ ನಂಬರ್ ಹಾಕಿ ಕಾಲ್ ಗರ್ಲ್ ಎಂಬಂತೆ ಬಿಂಬಿಸಿದ್ದಾನೆ. ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ ವೇಳೆ ಸಾಯಿ ಶಾಂತನ್ ಕುಕೃತ್ಯ ಬಯಲಾಗಿದೆ.

ಆತನನ್ನು ವಿಚಾರಣೆಗೆ ಕರೆಸಿಕೊಂಡಿದ್ದ ಪೊಲೀಸರು ಲ್ಯಾಪ್ ಟಾಪ್, ಪೆನ್ ಡ್ರೈವ್ ಹಾಗೂ ಮೊಬೈಲ್ ಪರಿಶೀಲನೆ ನಡೆಸಿದ ವೇಳೆ ಈತನದ್ದೇ ಕೃತ್ಯ ಎಂಬುದು ಕಂಡು ಬಂದಿದೆ. ಈ ಯುವತಿಗೆ ಮಾತ್ರವಲ್ಲದೇ ಈತ ಇದೇ ರೀತಿ ಇನ್ನೂ ಕೆಲ ಯುವತಿಯರ ಹೆಸರಿನಲ್ಲಿ ನಕಲಿ ಅಕೌಂಟ್ ತೆರೆದು ಅವರುಗಳಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಅಂಶವೂ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...