alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿನಲ್ಲೂ ಸಾರ್ಥಕತೆ ಮೆರೆದ‌ ಮಹಿಳೆಗೆ ಭಾವಪೂರ್ಣ ವಿದಾಯ

ತಮಿಳುನಾಡು ಮೂಲದ‌ ಮಹಿಳೆಯೊಬ್ಬರು ತಮ್ಮ ಸಾವಿನಲ್ಲಿಯೂ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಮರುಕುಲ್ಕುರಿಚಿ ಭಾಗದಲ್ಲಿ ದಂಪತಿಗಳಿಬ್ಬರು ನ.9 ರಂದು ಬೈಕ್‌ ನಲ್ಲಿ ಪ್ರಯಾಣಿಸುವಾಗ, ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ‌ ಬೈಕ್ ಸವಾರ ಮಣ್ಣಿಕಂ‌ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದರೆ, ಆತನ ಪತ್ನಿಗೆ ತೀವ್ರ ಗಾಯಗಳಾಗಿ, ಹೆಚ್ಚಿನ ಚಿಕಿತ್ಸೆಗೆಂದು ಸ್ಥಳೀಯ ‌ಸರಕಾರಿ ಆಸ್ಪತ್ರೆಯಿಂದ ಮೀನಾಕ್ಷಿ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸುಮಾರು ಒಂದು ವಾರ ಚಿಕಿತ್ಸೆ ಪಡೆದ ಬಳಿಕ ಆಕೆಯ ಮೆದುಳು‌ ನಿಷ್ಕ್ರಿಯಗೊಂಡಿರುವ ಬಗ್ಗೆ ವೈದ್ಯರು ಹೇಳುತ್ತಿದ್ದಂತೆ, ಆಕೆಯ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ಮುಂದಾಗುವ ಮೂಲಕ,‌ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.

ಕಿಡ್ನಿ, ಹೃದಯ ಹಾಗೂ ಶ್ವಾಸಕೋಶವನ್ನು ದಾನ ಮಾಡಿದ ಬಳಿಕ‌ ಪೋಸ್ಟ್ ಮಾರ್ಟಂ ಪ್ರಕ್ರಿಯೆ ಪೂರ್ಣಗೊಳಸಿ, ಶವವನ್ನು ಅಂತ್ಯಕ್ರಿಯೆ ಮಾಡಲಾಗಿದೆ‌. ಈ ವೇಳೆ ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಮಹಿಳೆಗೆ ವಿದಾಯ ಹೇಳಲು ಇಡೀ ಊರಿನ ಜನತೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...