alex Certify
ಕನ್ನಡ ದುನಿಯಾ       Mobile App
       

Kannada Duniya

ಹನುಮಂತನ ಕಣ್ಣಲ್ಲಿ ಬರುತ್ತಿದೆ ನೀರು !

hanuman tearsತೆಲಂಗಾಣದ ಖಮ್ಮಂ ಜಿಲ್ಲೆಯ ವೈರ ಮಂಡಲ್ ವ್ಯಾಪ್ತಿಯಲ್ಲಿರುವ ಬ್ರಹ್ಮಪಲ್ಲಿಯಲ್ಲಿನ ಆಂಜನೇಯ ದೇಗುಲದಲ್ಲಿರುವ ಪುರಾತನ ಮೂರ್ತಿಯ ಒಂದು ಕಣ್ಣಿನಿಂದ ನೀರು ಸುರಿಯುತ್ತಿದ್ದು, ಇದನ್ನು ನೋಡಲು ಭಕ್ತರು ಮುಗಿಬಿದ್ದಿರುವ ಘಟನೆ ನಡೆದಿದೆ.

ಸೋಮವಾರ ಬೆಳಿಗ್ಗೆ ಎಂದಿನಂತೆ ಅರ್ಚಕ ಆದಿತ್ಯ, ದೇವಾಲಯದ ಬಾಗಿಲು ತೆರೆದು ಪೂಜೆ ನೆರವೇರಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಖಮ್ಮಂ ಹಾಗೂ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಕೆಲ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದ ಬಳಿಕ ನೂರಾರು ತೆಂಗಿನ ಕಾಯಿಗಳನ್ನು ಒಡೆದಿದ್ದಾರೆನ್ನಲಾಗಿದೆ.

ಇದಾದ ಕೆಲ ಹೊತ್ತಿನಲ್ಲೇ ಆಂಜನೇಯ ಸ್ವಾಮಿ ಮೂರ್ತಿಯ ಒಂದು ಕಣ್ಣಿನಿಂದ ನೀರು ಸುರಿಯಲಾರಂಭಿಸಿದ್ದು, ಅರ್ಚಕ ಆದಿತ್ಯ ಅದನ್ನು ಒರೆಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಈ ಸುದ್ದಿ ಕ್ಷಣಾರ್ಧದಲ್ಲೇ ಎಲ್ಲೆಡೆ ಹರಡಿದ್ದು, ಇದನ್ನು ವೀಕ್ಷಿಸಲು ಭಕ್ತರು ತಂಡೋಪತಂಡವಾಗಿ ದೇವಾಲಯಕ್ಕೆ ಆಗಮಿಸಿದ್ದಾರೆ. ತಮ್ಮ ಜೀವಮಾನದಲ್ಲೇ ಇಂತಹ ದೃಶ್ಯ ನೋಡಿಲ್ಲವೆಂದು ಹೇಳಿರುವ ಹಲವು ಭಕ್ತರು, ಇದು ಸ್ವಾಮಿಯ ಪವಾಡ ಎನ್ನುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...