alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕ ಒತ್ತಾಯಪೂರ್ವಕವಾಗಿ ರಾಖಿ ಕಟ್ಟಿಸಿದ್ದೆ ತಪ್ಪಾಯ್ತು

ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 18 ವರ್ಷದ ವಿದ್ಯಾರ್ಥಿಗೆ ಶಿಕ್ಷಕ ಒತ್ತಾಯಪೂರ್ವಕವಾಗಿ ರಾಖಿ ಕಟ್ಟಿಸಿದ್ದೆ ತಪ್ಪಾಗಿದೆ. ಶಿಕ್ಷಕ, ವಿದ್ಯಾರ್ಥಿ ಗೆಳತಿಯಿಂದ ರಾಖಿ ಕಟ್ಟಿಸಿದ್ದಾರೆ. ಇದ್ರಿಂದ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಖಾಸಗಿ ಕಾಲೇಜಿನ ಪ್ರಿನ್ಸಿಪಾಲ್ ಹಾಗೂ ಕೆಲ ಶಿಕ್ಷಕರು ಆತ್ಮಹತ್ಯೆಗೆ ಯತ್ನಿಸಿದ ದಿಲೀಪ್ ಕುಮಾರ್ ಹಾಗೂ ಆತನ ಪ್ರೇಯಸಿಯನ್ನು ಕರೆದಿದ್ದಾರೆ. ಜೊತೆಗೆ ಅವ್ರ ಪಾಲಕರನ್ನೂ ಶಾಲೆಗೆ ಕರೆದಿದ್ದಾರೆ. ಎಲ್ಲರ ಸಮ್ಮುಖದಲ್ಲಿ ರಾಖಿ ಕಟ್ಟುವಂತೆ ಹುಡುಗಿಗೆ ಹೇಳಿದ್ದಾರೆ. ಇಬ್ಬರೂ ಇದನ್ನು ನಿರಾಕರಿಸಿದ್ದಾರೆ. ಒತ್ತಾಯವಾಗಿ ರಾಖಿ ಕಟ್ಟಿಸಲಾಗಿದೆ.

ಸ್ವಲ್ಪ ಸಮಯದಲ್ಲೇ ಕಟ್ಟಡದ ಮೇಲಿಂದ ಬಿದ್ದು ದಿಲೀಪ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದಿಲೀಪ್ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...