alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿಯನ್ನು ಮನೆಯಿಂದ ಹೊರ ಹಾಕಿ ಪ್ರವಾಸಕ್ಕೆ ಹೋದ ಶಿಕ್ಷಕ

ಪಶ್ಚಿಮ ಬಂಗಾಳದ ಬೈರಕ್ ಪುರದಲ್ಲಿ ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದೆ. ಶಿಕ್ಷಕನೊಬ್ಬ ತನ್ನ ಮನೆಗೆ ಬೀಗ ಹಾಕಿ ಪತ್ನಿ ಜೊತೆ ಪ್ರವಾಸಕ್ಕೆ ತೆರಳಿದ್ದಾನೆ. ಪತ್ನಿ ಜೊತೆ ಎಂಜಾಯ್ ಮಾಡ್ತಿರುವ ಶಿಕ್ಷಕ 70 ವರ್ಷದ ತಾಯಿಯನ್ನು ಮಾತ್ರ ಬೀದಿಯಲ್ಲಿ ಬಿಟ್ಟಿದ್ದಾನೆ.

ಅನ್ನ-ಆಹಾರವಿಲ್ಲದೆ ನಿತ್ರಾಣವಾಗಿದ್ದ ಮಹಿಳೆಗೆ ಸ್ಥಳೀಯರು ಆಸರೆಯಾಗಿದ್ದಾರೆ. ಮೂಲಗಳ ಪ್ರಕಾರ ದಂಪತಿ ಮನೆ ಬೈರಕ್ಪುರದಲ್ಲಿದೆ. ಮೊದಲು ತಾಯಿಯನ್ನು ಮನೆಯಿಂದ ಹೊರ ಹಾಕಿ ಮನೆಗೆ ಬೀಗ ಜಡಿದ ಶಿಕ್ಷಕ, ಪತ್ನಿ ಜೊತೆ ಪ್ರವಾಸಕ್ಕೆ ಹೋಗಿದ್ದಾನಂತೆ.

ಮೊದಲೆರಡು ದಿನ ಮಹಿಳೆ ಅಲ್ಲಿ ಇಲ್ಲಿ ಅಲೆದಿದ್ದಾಳೆ. ಹಸಿವು ತಡೆಯಲಾಗದೆ ಅಳಲು ಶುರು ಮಾಡಿದ್ದಾಳೆ. ಆಗ ಸ್ಥಳೀಯರ ಗಮನ ಆಕೆ ಮೇಲೆ ನೆಟ್ಟಿದೆ. ವಾಸಕ್ಕೊಂದು ಜಾಗ ನೀಡಿ ಆಹಾರವನ್ನು ನೀಡಲಾಗುತ್ತಿದೆಯಂತೆ. ಮಗ ಪ್ರವಾಸ ಮುಗಿಸಿ ಊರಿಗೆ ವಾಪಸ್ಸಾದ ನಂತ್ರ ಸೂಕ್ತ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...