alex Certify
ಕನ್ನಡ ದುನಿಯಾ       Mobile App
       

Kannada Duniya

25ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಮಾಡಿದ ಶಿಕ್ಷಕ

ಉತ್ತರ ಪ್ರದೇಶದ ಅಜಮ್ಗಡದಲ್ಲಿ ಗುರು-ಶಿಷ್ಯರ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. ಶಿಕ್ಷಕನೊಬ್ಬ ಹೇಸಿಗೆ ಕೆಲಸ ಮಾಡಿದ್ದಾನೆ. ಜಿಲ್ಲೆಯ ಕಾಲೇಜೊಂದರ ಗಣಿತ ಶಿಕ್ಷಕ ಕಾಲೇಜಿನ ಬಳಿಯಿರುವ ಕೋಚಿಂಗ್ ಸೆಂಟರ್ ನಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಪ್ರೀತಿ ಬಲೆಗೆ ಬೀಳಿಸಿ ಅಶ್ಲೀಲ ವಿಡಿಯೋ ಮಾಡಿದ್ದಾನೆ.

ಶಿಕ್ಷಕ ಚಂದ್ರಶೇಖರ್ ಯಾದವ್ ಎಂಬಾತ ರಹಮತ್ ಇಂಟರ್ ಕಾಲೇಜಿನಲ್ಲಿ ಗಣಿತಶಾಸ್ತ್ರ ಶಿಕ್ಷಕನಾಗಿದ್ದಾನೆ. ಕಾಲೇಜ್ ಹೊರಗಿರುವ ಕೋಚಿಂಗ್ ಸೆಂಟರ್ ನಲ್ಲಿ ಹೈಸ್ಕೂಲ್ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡ್ತಾನೆ. ಸಂಜೆ ಐದು ಗಂಟೆಗೆ ಚಂದ್ರಶೇಖರ್ ಯಾದವ್ ಕೋಚಿಂಗ್ ಸೆಂಟರ್ ಬಾಗಿಲು ಮುಚ್ಚುತ್ತಿದ್ದ. ನಂತ್ರ 2-3 ವಿದ್ಯಾರ್ಥಿಗಳನ್ನು ಸ್ಪೇಷಲ್ ಕ್ಲಾಸ್ ಹೆಸರಿನಲ್ಲಿ ಒಳಗಿಟ್ಟುಕೊಂಡು ಲೈಂಗಿಕ ಕಿರುಕುಳ ನೀಡ್ತಿದ್ದ. ಅದ್ರ ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡ್ತಿದ್ದ.

ಕೆಲ ವಿದ್ಯಾರ್ಥಿಗಳಿಗೆ ಈ ಸಂಗತಿ ತಿಳಿದಿತ್ತು. ಸಮಯ ಸಾಧಿಸಿ ವಿದ್ಯಾರ್ಥಿನಿಯರಿಗೆ ಮೋಸ ಮಾಡ್ತಿದ್ದ ಶಿಕ್ಷಕನ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಆದ್ರೆ ಶಿಕ್ಷಕ ತಪ್ಪಿಸಿಕೊಂಡಿದ್ದಾನೆಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...