alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಿಸುವ ನೆಪದಲ್ಲಿ ಬಾಲಕಿಗೆ ಚಿತ್ರಹಿಂಸೆ ನೀಡಿದ್ದಾಳೆ ಶಿಕ್ಷಕಿ

girl

ಆಗ್ರಾದಲ್ಲಿ ಶಿಕ್ಷಕಿಯೊಬ್ಳು ಒಂದನೇ ತರಗತಿಯ ಬಾಲಕಿಯನ್ನು ಕ್ಲಾಸ್ ರೂಮಿನಲ್ಲಿ ಕೂಡಿ ಹಾಕಿದ್ಲು. ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ರಿಂದ ಬಾಲಕಿಯ ತಲೆ ಬಾಗಿಲುಗಳ ಮಧ್ಯೆ ಸಿಕ್ಕಿಹಾಕಿಕೊಂಡಿತ್ತು. ಸುಮಾರು 2 ಗಂಟೆಗಳ ಕಾಲ ಬಾಲಕಿ ಅದೇ ರೀತಿ ನೋವು ಅನುಭವಿಸಿದ್ದಾಳೆ.

ಧೋಬೈ ಗ್ರಾಮದಲ್ಲಿರೋ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಬಾಲಕಿಯನ್ನು ತರಗತಿಯಲ್ಲಿ ಕೂಡಿ ಹಾಕಿ ಶಿಕ್ಷಕಿ ಅಲ್ಲಿಂದ ತೆರಳಿದ್ದಾಳೆ. ಎಲ್ಲಾ ಮಕ್ಕಳೂ ಮಧ್ಯಾಹ್ನ ಮನೆಗೆ ಹೋಗಿದ್ರು. ಎಷ್ಟೊತ್ತಾದ್ರೂ ಸಾಕ್ಷಿ ಮನೆಗೆ ಬಾರದೇ ಇದ್ದಿದ್ರಿಂದ ಆಕೆಯ ಚಿಕ್ಕಪ್ಪ ಹುಡುಕಿಕೊಂಡು ಬಂದಿದ್ರು.

ಸುಮಾರು 2 ಗಂಟೆಗಳ ಕಾಲ ಸಹಾಯಕ್ಕಾಗಿ ಕೂಗಿ ಕೂಗಿ ಸುಸ್ತಾಗಿದ್ದ 8 ವರ್ಷದ ಬಾಲಕಿ ಸಾಕ್ಷಿ ತರಗತಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ಲು. ಅವಳ ತಲೆ ಬಾಗಿಲುಗಳ ಮಧ್ಯೆ ಸಿಕ್ಕಿಹಾಕಿಕೊಂಡಿತ್ತು. ಮಧ್ಯಾಹ್ನ 1 ಗಂಟೆಗೆ ಶಾಲೆ ಬಂದ್ ಆಗಿದೆ. 2.45ರ ವೇಳೆಗೆ ಪೊಲೀಸರು ಬಂದು ಸಾಕ್ಷಿಯನ್ನು ರಕ್ಷಣೆ ಮಾಡಿದ್ದಾರೆ.

ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವಳ ಆರೋಗ್ಯ ಸ್ಥಿರವಾಗಿದೆ. ಶಿಕ್ಷೆ ನೆಪದಲ್ಲಿ ಬಾಲಕಿಯನ್ನು ಹಿಂಸಿಸಿದ ಶಿಕ್ಷಕಿ ಹಾಗೂ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...