alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆಯಲ್ಲೇ ವಿದ್ಯಾರ್ಥಿಯ ಪ್ಯಾಂಟ್ ಬಿಚ್ಚಿಸಿದ ಶಿಕ್ಷಕಿ

ನವಿ ಮುಂಬೈ ಶಾಲೆಯ ಮಹಿಳಾ ಶಿಕ್ಷಕರೊಬ್ಬರು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಇತರೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿದ್ಯಾರ್ಥಿಯೊಬ್ಬನ ಬಟ್ಟೆ ಬಿಚ್ಚಿಸಿದ ತಪ್ಪಿಗೆ ಅವರನ್ನ ಬಂಧಿಸಲಾಗಿದೆ. ಒಂದನೇ ತರಗತಿಯ ವಿದ್ಯಾರ್ಥಿಯೊಬ್ಬನ ತುಂಟತನಕ್ಕೆ ಶಿಕ್ಷೆ ನೀಡುವ ಭರದಲ್ಲಿ ಮಾಡಿದ ಯಡವಟ್ಟು ಶಿಕ್ಷಕಿಗೆ ಪೀಕಲಾಟ ತಂದಿಟ್ಟಿದೆ.

ತರಗತಿಯಲ್ಲಿ ತುಂಟತನ ಮಾಡ್ತಾನೆ ಅನ್ನೋ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಇತರೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ಯಾಂಟ್ ತೆಗೆಯುವ ಶಿಕ್ಷೆ ನೀಡಿದ್ದರು. ಈ ವಿಚಾರವನ್ನ ಪೋಷಕರಿಗೆ ಆ ಬಾಲಕ ತಿಳಿಸಿದ್ದ. ಇದರಿಂದ ಶಿಕ್ಷಕಿ ವಿರುದ್ಧ ಕೋಪಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ನಡೆಸೋಕೆ ಪೊಲೀಸರು ಶಾಲೆಗೆ ಬಂದು ಶಿಕ್ಷಕರನ್ನ ಸ್ಪಷ್ಟಣೆ ಕೇಳಿದ್ದಾರೆ. ವಿದ್ಯಾರ್ಥಿಗಳನ್ನ ತಾನು ಮಕ್ಕಳ ಹಾಗೆ ನೋಡುತ್ತಿದ್ದು, ತುಂಟ ವಿದ್ಯಾರ್ಥಿಯಾಗಿದ್ದವನಿಗೆ ಶಿಸ್ತು ಮೂಡಿಸುವ ಸಲುವಾಗಿ ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಬಾಲಕನ ಪೋಷಕರು ಶಿಸ್ತು ಮೂಡಿಸೋದಕ್ಕಾಗಿ ಈ ರೀತಿಯ ಅವಮಾನವನ್ನ ಮಕ್ಕಳಿಗೆ ಮಾಡೋದು ಸರಿ ಇಲ್ಲ. ಪೊಲೀಸರು ಕೈಗೊಂಡಿರುವ ಕ್ರಮದ ಬಗ್ಗೆ ನಮಗೆ ಸಮಾಧಾನವಿದೆ ಅಂತ ಹೇಳಿದ್ದಾರೆ. ಶಿಕ್ಷಕಿಯನ್ನ ಬಂಧಿಸಿದ ಪೊಲೀಸರು ಎಫ್ಐಆರ್ ದಾಖಲಿಸಿ, ಆನಂತರದಲ್ಲಿ ಅವರನ್ನ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...