alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಸಿ ಸ್ಥಳವಾಗಲಿದೆ ಮೋದಿ ಟೀ ಮಾರಿದ್ದ ಸ್ಥಳ

download

ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಾಲ್ಯದಲ್ಲಿ ಟೀ ಮಾರಾಟ ಮಾಡುತ್ತಿದ್ದರು ಎಂಬ ವಿಚಾರ ಎಲ್ಲರಿಗೂ ಗೊತ್ತು. ಗುಜರಾತನ ವಡ್ನಗರ್ ರೈಲ್ವೆ ನಿಲ್ದಾಣದಲ್ಲಿ ಮೋದಿ ಟೀ ಮಾರಾಟ ಮಾಡುತ್ತಿದ್ದರು. ಮೋದಿ ಟೀ ಮಾರಾಟ ಮಾಡ್ತಿದ್ದ ಸ್ಟಾಲ್ ಗೆ ಹೊಸ ರೂಪ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈಗ ಇದೊಂದು ಪ್ರವಾಸಿ ತಾಣವಾಗಲಿದೆ.

ವಡ್ನಾಗರ್ ರೈಲ್ವೆ ನಿಲ್ದಾಣದಲ್ಲಿರುವ ಸಣ್ಣ ಸ್ಟಾಲ್ ಒಂದರಲ್ಲಿ ಮೋದಿ ಟೀ ಮಾರಾಟ ಮಾಡ್ತಿದ್ದರು. ಅಲ್ಲಿಂದಲೇ ಮೋದಿ ತಮ್ಮ ಲೈಫ್ ಜರ್ನಿ ಶುರುಮಾಡಿದ್ದಾರೆ ಎಂದ್ರೂ ತಪ್ಪಾಗಲಾರದು. ಇದನ್ನು ಪ್ರವಾಸಿ ತಾಣವಾಗಿಸಿ, ವಿಶ್ವದ ಭೂಪಟದಲ್ಲಿ ತಮ್ಮ ಜನ್ಮಸ್ಥಳದ ಹೆಸರು ಪ್ರಸಿದ್ಧಿ ಪಡೆಯಬೇಕೆಂಬುದು ಪಿಎಂ ಆಸೆ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ.

ವಡ್ನಾಗರ್ ಮೋದಿ ಜನ್ಮ ಸ್ಥಳವೊಂದೇ ಅಲ್ಲ. ಒಂದು ಸುಂದರ ಪ್ರವಾಸಿ ಸ್ಥಳ. ಶರ್ಮಿಷ್ಠ ಸರೋವರ ಸೇರಿದಂತೆ ಅನೇಕ ಸುಂದರ ತಾಣಗಳು ಅಲ್ಲಿವೆ. ಇಲ್ಲಿಗೆ ಬೌದ್ಧ ಸನ್ಯಾಸಿಗಳು ಭೇಟಿ ನೀಡಿದ್ದರು. ಇಲ್ಲಿ ಇನ್ನೂ ಉತ್ಖನನ ನಡೆಯುತ್ತಿದೆ ಎಂದು ಮಹೇಶ್ ಶರ್ಮಾ ಹೇಳಿದ್ದಾರೆ.

100 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಶೀಘ್ರದಲ್ಲಿಯೇ ಕಾಮಗಾರಿ ಶುರುವಾಗಲಿದೆ ಎಂದು ಸಚಿವರು ಹೇಳಿದ್ದಾರೆ. ಮೋದಿ 6 ವರ್ಷದವರಿದ್ದಾಗ ಇಲ್ಲಿ ಟೀ ಮಾರಲು ಶುರುಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...