alex Certify
ಕನ್ನಡ ದುನಿಯಾ       Mobile App
       

Kannada Duniya

ಚಹಾ, ಸಮೋಸಾಕ್ಕೆ 9 ಕೋಟಿ ರೂ. ಖರ್ಚು ಮಾಡಿದೆ ಯುಪಿ ಸರ್ಕಾರ

UP TEAಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನೋ ಮಾತು ಉತ್ತರ ಪ್ರದೇಶ ಸರ್ಕಾರಕ್ಕೆ ಚೆನ್ನಾಗೇ ಹೊಂದಿಕೆಯಾಗುತ್ತೆ. ಜನರ ದುಡ್ಡನ್ನು ಜನಪ್ರತಿನಿಧಿಗಳು ಬೇಕಾಬಿಟ್ಟಿಯಾಗಿ ಖರ್ಚು ಮಾಡ್ತಿದ್ದಾರೆ.

ಅತಿಥಿಗಳಿಗೆ ಚಹಾ, ಸಮೋಸಾ, ಗುಲಾಬ್ ಜಾಮೂನ್ ಕೊಡಲು ಉತ್ತರ ಪ್ರದೇಶದ ಸಚಿವರು 9 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಅದು ಕೂಡ ಕೇವಲ 4 ವರ್ಷಗಳಲ್ಲಿ. ಸ್ವತಃ ಸಿಎಂ ಅಖಿಲೇಶ್ ಯಾದವ್ ಈ ಮಾಹಿತಿಯನ್ನು ವಿಧಾನಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.

ಸಮಾಜ ಕಲ್ಯಾಣ ಸಚಿವ ಅರುಣ್ ಕುಮಾರ್ ಅವರಿಗೆ ಇವರಲ್ಲಿ ಮೊದಲ ಸ್ಥಾನ, ಅವರು 22,93,800 ರೂಪಾಯಿ ವ್ಯಯಿಸಿದ್ದಾರೆ. ನಗರಾಭಿವೃದ್ಧಿ ಸಚಿವ ಮೊಹಮದ್ ಅಜಮ್ ಖಾನ್ 22,86,620 ರೂಪಾಯಿ ಖರ್ಚು ಮಾಡಿದ್ರೆ, ಪ್ರಾಥಮಿಕ ಶಿಕ್ಷಣ ಮಂತ್ರಿ ಕೈಲಾಶ್ ಚೌರಾಸಿಯಾ 22,85,900 ರೂಪಾಯಿ ಖರ್ಚು ಮಾಡಿದ್ದಾರೆ.

ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ ಅತಿಥಿಗಳಿಗೆ ತಿನಿಸು, ಪಾನೀಯ ಕೊಡುವ ನೆಪದಲ್ಲಿ ಪಿಡಬ್ಲ್ಯೂಡಿ ಸಚಿವ ಶಿವಪಾಲ್ ಯಾದವ್ ನಯಾಪೈಸೆ ಖರ್ಚು ಮಾಡಿಲ್ಲ. ಸಚಿವರೆಲ್ಲ ರಿಫ್ರೆಶ್ ಮೆಂಟ್ ಗಾಗಿ ಪ್ರತಿದಿನ ಸರಾಸರಿ 2,500 ರೂಪಾಯಿ ಖರ್ಚು ಮಾಡಿದ್ದಾರೆ. ಸರ್ಕಾರದ ಈ ಕ್ರಮವನ್ನು ಟೀಕಿಸಿರುವ ಬಿಜೆಪಿ, ಜನರ ಹಣವನ್ನು ಲೂಟಿ ಮಾಡಲಾಗ್ತಿದೆ ಅಂತಾ ಕಿಡಿಕಾರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...