alex Certify
ಕನ್ನಡ ದುನಿಯಾ       Mobile App
       

Kannada Duniya

ಭೂತದ ಭಯ ಓಡಿಸಲು ಸ್ಮಶಾನದಲ್ಲಿ ರಾತ್ರಿ ಕಳೆದ ಶಾಸಕ

ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಚಿತಾಗಾರವೊಂದರ ನಿರ್ಮಾಣ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಟಿಡಿಪಿ ಶಾಸಕ ನಿಮ್ಲಾಲ್ ರಾಮ್ ನಾಯ್ಡು ಸ್ಮಶಾನದಲ್ಲಿಯೇ ರಾತ್ರಿ ಕಳೆದಿದ್ದಾರೆ. ಸ್ಮಶಾನದಲ್ಲಿಯೇ ರಾತ್ರಿ ಊಟ ಮಾಡಿದ ಅವ್ರು ರಾತ್ರಿ ಅಲ್ಲಿಯೇ ಮಲಗಿದ್ದರು. ಬೆಳಗ್ಗೆ ಎದ್ದು ಮನೆಗೆ ಹೋಗಿ ಮತ್ತೆ ಸ್ಮಶಾನಕ್ಕೆ ಬಂದು ನಿರ್ಮಾಣ ಕಾರ್ಯ ವೀಕ್ಷಿಸಿದ್ದಾರೆ.

ಒಂದು ವರ್ಷದ ಹಿಂದೆಯೇ ಸ್ಮಶಾನ ನವೀಕರಣಕ್ಕೆ 3 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಆದ್ರೆ ಚಿತಾಗಾರ ನವೀಕರಣ ಕೆಲಸ ನಡೆದಿಲ್ಲ. ಒಂದು ಕಡೆ ಶವಕ್ಕೆ ಬೆಂಕಿ ಹಚ್ಚಿರುತ್ತಾರೆ. ಇನ್ನೊಂದು ಕಡೆ ನಿರ್ಮಾಣ ಕಾರ್ಯ ನಡೆಯುತ್ತಿರುತ್ತದೆ. ನೆಲ ಅಗೆದಾಗ ಕೆಲವೊಂದು ದೇಹದ ಭಾಗ ಕಾರ್ಮಿಕರಿಗೆ ಸಿಗುತ್ತದೆ.

ಚಿತಾಗಾರದಲ್ಲಿ ಸಿಗುವ ದೇಹದ ಭಾಗಗಳು ಕಾರ್ಮಿಕರ ಭಯಕ್ಕೆ ಕಾರಣವಾಗಿದೆ. ಆತ್ಮಗಳು ತೊಂದರೆ ನೀಡುತ್ತವೆ ಎಂದು ಕಾರ್ಮಿಕರು ಚಿತಾಗಾರ ಕೆಲಸಕ್ಕೆ ಬರ್ತಿಲ್ಲ. ಕಾರ್ಮಿಕರ ಈ ಭಯವನ್ನು ಹೋಗಲಾಡಿಸಲು ಟಿಡಿಪಿ ಶಾಸಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಜೊತೆಗೆ ಇನ್ನೊಂದು ದಿನ ಸ್ಮಶಾನದಲ್ಲಿಯೇ ರಾತ್ರಿ ಕಳೆಯುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...