alex Certify
ಕನ್ನಡ ದುನಿಯಾ       Mobile App
       

Kannada Duniya

ತೆರಿಗೆ ಪಾವತಿದಾರರಿಗೆ ಬಜೆಟ್ ನಲ್ಲಿ ಬಂಪರ್

new-1

ನಿರೀಕ್ಷೆಯಂತೆ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ದೇಶದ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಸಚಿವ ಅರುಣ್ ಜೇಟ್ಲಿ ರಿಲೀಫ್ ಕೊಟ್ಟಿದ್ದಾರೆ. ಆದಾಯ ತೆರಿಗೆ ಮಿತಿಯನ್ನು 3 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಇನ್ಮೇಲೆ 3 ಲಕ್ಷ ರೂಪಾಯಿ ವಾರ್ಷಿಕ ಆದಾಯ ಹೊಂದಿರುವವರು ಸರ್ಕಾರಕ್ಕೆ ತೆರಿಗೆ ಪಾವತಿಸಬೇಕಾಗಿಲ್ಲ.

ಇನ್ನು ಆದಾಯ ತೆರಿಗೆ ಮಿತಿಯನ್ನು ಕೂಡ ಸರ್ಕಾರ ಶೇ.10ರಿಂದ ಶೇ.5ಕ್ಕೆ ಇಳಿಕೆ ಮಾಡಿದೆ. 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂ. ಆದಾಯ ಹೊಂದಿರುವವರು ಶೇ.5ರಷ್ಟು ತೆರಿಗೆ ಪಾವತಿಸಬೇಕು. 5 ಲಕ್ಷದಿಂದ 10 ಲಕ್ಷ ರೂಪಾಯಿ ಆದಾಯ ಹೊಂದಿರುವವರಿಗೆ ಶೇ.20ರಷ್ಟು ಹಾಗೂ 10 ಲಕ್ಷಕ್ಕೂ ಮೇಲ್ಪಟ್ಟು ಆದಾಯ ಗಳಿಸುವವರಿಗೆ ಶೇ.30ರಷ್ಟು ತೆರಿಗೆ ವಿಧಿಸಲಾಗಿದೆ.

50 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವವರಿಗೆ ಶೇ.10ರಷ್ಟು ಸರ್ಚಾರ್ಜ್ ವಿಧಿಸಲಾಗಿದೆ. ಇನ್ನು ದೇಶದ ಸಣ್ಣ ಕಂಪನಿಗಳಿಗೆ ಕೂಡ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಉತ್ತೇಜನ ನೀಡಿದೆ. ವಾರ್ಷಿಕ 50 ಕೋಟಿ ರೂಪಾಯಿ ವಹಿವಾಟು ನಡೆಸುವ ಕಂಪನಿಗಳಿಗೆ ಶೇ.5ರಷ್ಟು ತೆರಿಗೆ ಕಡಿತ ಮಾಡಲಾಗಿದೆ. ಸರ್ಕಾರ ತೆರಿಗೆಯನ್ನು ಶೇ.30ರಿಂದ ಶೇ.25ಕ್ಕೆ ಇಳಿಸಿದೆ. ನಗದು ವ್ಯವಹಾರದ ಮಿತಿಯನ್ನು ಬಜೆಟ್ ನಲ್ಲಿ 3 ಲಕ್ಷಕ್ಕೆ ನಿಗದಿ ಮಾಡಲಾಗಿದೆ. ಅದಕ್ಕಿಂತ ಹೆಚ್ಚಿನ ವಹಿವಾಟನ್ನು ಡಿಜಿಟಲ್ ಟ್ರಾನ್ಸಾಕ್ಷನ್ ಮೂಲಕ ಜನರು ಮಾಡಬೇಕಿದೆ. ಇನ್ನು ದೇಶದಲ್ಲಿ ನೇರ ತೆರಿಗೆ ಪಾವತಿಸುವವರ ಪ್ರಮಾಣ ಕಡಿಮೆ ಇದೆ ಅನ್ನೋದನ್ನು ಕೂಡ ಜೇಟ್ಲಿ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ರು.

2016-17ರಲ್ಲಿ ಆದಾಯ ತೆರಿಗೆ ಘೋಷಿತರ ವಿವರ ಈ ರೀತಿ ಇದೆ. 50 ಲಕ್ಷ ಆದಾಯ ಹೊಂದಿರುವವರ ಸಂಖ್ಯೆ 1.72 ಲಕ್ಷದಷ್ಟಿದ್ರೆ, 24 ಲಕ್ಷ ಮಂದಿಯ ಆದಾಯ 10 ಲಕ್ಷಕ್ಕಿಂತ ಹೆಚ್ಚಿದೆ. 99 ಲಕ್ಷ ಜನ ತಮ್ಮ ಆದಾಯ 2.5 ಲಕ್ಷಕ್ಕಿಂತಲೂ ಕಡಿಮೆ ಅಂತಾ ಘೋಷಿಸಿಕೊಂಡಿದ್ದಾರೆ. ಆದ್ರೆ ಕಾರುಗಳ ಮಾರಾಟ ಹೆಚ್ಚಿದೆ, ವಿದೇಶ ಪ್ರವಾಸಕ್ಕೆ ತೆರಳುವವರ ಸಂಖ್ಯೆ ಕೂಡ ಅಧಿಕವಾಗಿದೆ. ಇನ್ನು ಭಾರತದಲ್ಲಿ 13.97 ಲಕ್ಷ ನೋಂದಾಯಿತ ಕಂಪನಿಗಳಿದ್ದು, 5.97 ಲಕ್ಷ ಸಂಸ್ಥೆಗಳು ಮಾತ್ರ ತೆರಿಗೆ ಪಾವತಿ ಮಾಡಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...