alex Certify
ಕನ್ನಡ ದುನಿಯಾ       Mobile App
       

Kannada Duniya

ಜಂಕ್ ಫುಡ್ ಪ್ರಿಯರಿಗೆ ಬಜೆಟ್ ನಲ್ಲಿ ಶಾಕ್..?

nagrota-26-1

ಜಂಕ್ ಫುಡ್ ಪ್ರಿಯರಿಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಶಾಕ್ ನೀಡಲಿದೆ. ಜಂಕ್ ಫುಡ್ ಹಾಗೂ ಕೋಕ್, ಪೆಪ್ಸಿ ಇತ್ಯಾದಿ ತಂಪು ಪಾನೀಯಗಳ ಮೇಲೆ ಫ್ಯಾಟ್ ತೆರಿಗೆ ವಿಧಿಸುವ ಸಾಧ್ಯತೆ ಇದೆ.

ಜಂಕ್ ಫುಡ್, ಕೋಲ್ಡ್ ಡ್ರಿಂಕ್ ಸೇವನೆ ಹಾಗೂ ಕೆಟ್ಟ ಜೀವನಶೈಲಿಯಿಂದಾಗಿ ಆರೋಗ್ಯ ಹದಗೆಡುತ್ತಿದೆ. ಇದರಿಂದ ಜನರನ್ನು ರಕ್ಷಿಸುವ ಉದ್ದೇಶಕ್ಕಾಗಿ ಫ್ಯಾಟ್ ತೆರಿಗೆ ವಿಧಿಸಲು ನಿರ್ಧರಿಸಿದೆ. ಈ ತೆರಿಗೆಯಿಂದಾಗಿ ಜಂಕ್ ಫುಡ್ ಹಾಗೂ ತಂಪು ಪಾನೀಯಗಳ ಬೆಲೆ ಹೆಚ್ಚಳವಾಗಲಿದೆ. ಇದ್ರಿಂದಾಗಿ ಈ ಕೊಬ್ಬು ಆಹಾರ ಸೇವನೆ ಮಾಡುವವರ ಸಂಖ್ಯೆ ಕಡಿಮೆಯಾಗಲಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಫ್ಯಾಟ್ ಟ್ಯಾಕ್ಸ್ ಬಗ್ಗೆ ತೀರ್ಮಾನ ಕೈಗೊಳ್ಳಲು ಕೇಂದ್ರ ಸರ್ಕಾರ ಒಂದು ತಂಡವನ್ನು ರಚಿಸಿದೆ. ಅದು ಜಂಕ್ ಫುಡ್ ಹಾಗೂ ತಂಪು ಪಾನೀಯದಲ್ಲಿರುವ ಸಕ್ಕರೆ, ಉಪ್ಪು, ಕೊಬ್ಬಿನಾಂಶವನ್ನು ಪರಿಗಣಿಸಿ ಯಾವುದಕ್ಕೆ ಎಷ್ಟು ತೆರಿಗೆ ಎಂಬುದನ್ನು ನಿರ್ಧರಿಸಲಿದೆ. ನಾಲ್ಕನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ 10 ವರ್ಷದಲ್ಲಿ ಬೊಜ್ಜು ಎರಡು ಪಟ್ಟು ಹೆಚ್ಚಾಗಿದೆ. ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್, ಪುದುಚೇರಿಯಲ್ಲಿ ಶೇಕಡಾ 30ರಷ್ಟು ಮಂದಿ ಬೊಜ್ಜಿನಿಂದ ಬಳಲುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...