alex Certify
ಕನ್ನಡ ದುನಿಯಾ       Mobile App
       

Kannada Duniya

ಬಣ್ಣದ ಬಗ್ಗೆ ಅವಹೇಳನ ಮಾಡ್ತಿದ್ದವರಿಗೆ ವಿಷ ಹಾಕಿದ್ಲು : 5 ಮಂದಿ ಸಾವು

ಮಹಾರಾಷ್ಟ್ರದ ರಾಯ್ಗಡದಲ್ಲಿ ಐವರ ಕೊಲೆ ಆರೋಪದ ಮೇಲೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. 28 ವರ್ಷದ ಜ್ಯೋತಿ ಸುರೇಶ್ ಸುರವಾಸೆ ಆರೋಪಿತ ಮಹಿಳೆ. ಕುಟುಂಬದ ಕಾರ್ಯಕ್ರಮವೊಂದರ ಆಹಾರದಲ್ಲಿ ಮಹಿಳೆ ವಿಷ ಬೆರೆಸಿದ್ದಾಳೆ. ಘಟನೆಯಲ್ಲಿ ಐದು ಜನ ಸಾವನ್ನಪ್ಪಿದ್ದು, 120 ಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೊಳಗಾಗಿದ್ದಾರೆ.

ಜ್ಯೋತಿ ಗಂಡನ ಮನೆಯವರು ಹಾಗೂ ಸಂಬಂಧಿಕರು ಆಕೆ ಬಣ್ಣ ಹಾಗೂ ಆಹಾರ ತಯಾರಿಕೆ ಬಗ್ಗೆ ಅವಹೇಳನ ಮಾಡುತ್ತಿದ್ದರಂತೆ. ಇದ್ರಿಂದ ಕೋಪಗೊಂಡಿದ್ದ ಜ್ಯೋತಿ ವಿಷ ಬೆರೆಸಿದ್ದಾಳೆ. ಮಹಾಡ್ ಗ್ರಾಮದ ಸಂಬಂಧಿಕರೊಬ್ಬರ ಮನೆಯೊಂದರಲ್ಲಿ ಪಾರ್ಟಿ ನಡೆಯುತ್ತಿತ್ತು. ಅಲ್ಲಿಗೆ ಹೋಗಿದ್ದ ಜ್ಯೋತಿ ಆಹಾರದಲ್ಲಿ ಕೀಟನಾಶಕ ಬೆರೆಸಿದ್ದಾಳೆ.

ದಾಲ್ ತಿಂದ ನಾಲ್ಕು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. 120 ಮಂದಿ ಆಸ್ಪತ್ರೆ ಸೇರಿದ್ದಾರೆ. ಘಟನೆಯಲ್ಲಿ ಮಹಿಳೆಯ ಇಬ್ಬರು ಸಂಬಂಧಿಕರು ಸಾವನ್ನಪ್ಪಿದ್ದಾರಂತೆ. ಆಹಾರವನ್ನು ವಶಕ್ಕೆ ಪಡೆದಿರುವ ಪೊಲೀಸರು ಪರಿಶೀಲನೆಗೆ ಕಳುಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...