alex Certify
ಕನ್ನಡ ದುನಿಯಾ       Mobile App
       

Kannada Duniya

ಅನಾಹುತಕ್ಕೆ ಕಾರಣವಾಯ್ತು ಆಕೆಯ ಸೌಂದರ್ಯ

face

ಪಿಲಿಭಿಟ್: ನೀನು ನೋಡಲು ಸುಂದರವಾಗಿರುವೆ. ಎಲ್ಲರೂ ನಿನ್ನನ್ನೇ ನೋಡುತ್ತಾರೆ ಎಂದು ಗಂಡನ ಮನೆಯಲ್ಲಿ ಪದೇ ಪದೇ ಕೊಂಕು ನುಡಿಗಳನ್ನಾಡಿದ್ದರಿಂದ ಬೇಸತ್ತ ಮಹಿಳೆಯೊಬ್ಬಳು ಅನಾಹುತ ಮಾಡಿಕೊಂಡಿದ್ದಾಳೆ.

ಸುಂದರವಾಗಿದ್ದ ಮಹಿಳೆ, ಗಂಡ ಹಾಗೂ ಮಾವನ ಕೊಂಕು ನುಡಿಯಿಂದ ಬೇಸತ್ತು ಮುಖಕ್ಕೆ ಬೆಂಕಿ ಹಚ್ಚಿಕೊಂಡ ಮನ ಕಲಕುವ ಘಟನೆ ಉತ್ತರ ಪ್ರದೇಶದ ಪಿಲಿಭಿಟ್ ನಲ್ಲಿ ನಡೆದಿದೆ. 30 ವರ್ಷದ ರೂಪಾ ಲೋಧಿ ಎಂಬ ಮಹಿಳೆಗೆ 2 ವರ್ಷಗಳ ಹಿಂದಷ್ಟೇ ಮದುವೆಯಾಗಿತ್ತು. ಆಕೆ ಸುಂದರವಾಗಿದ್ದರಿಂದ ಬೇರೆ ಪುರುಷರೆಲ್ಲಾ ನೋಡುತ್ತಾರೆ ಎಂದು ಗಂಡ ಹಾಗೂ ಮಾವ ಕೊಂಕು ನುಡಿಯುತ್ತಿದ್ದರು. ಇದರಿಂದ ಬೇಸತ್ತ ಆಕೆ ಬೆಂಕಿ ಹಚ್ಚಿಕೊಂಡಿದ್ದಾಳೆ.

ತೀವ್ರ ಸುಟ್ಟ ಗಾಯಗಳಾಗಿರುವ ರೂಪಾ ಲೋಧಿಯನ್ನು ಫಿಲಿಬಿಟ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಗಂಡ ಹಾಗೂ ಮಾವನ ಕೊಂಕು ನುಡಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಹೀಗೆ ಮಾಡಿಕೊಂಡಿದ್ದಾಗಿ ರೂಪಾ ಹೇಳಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...