alex Certify
ಕನ್ನಡ ದುನಿಯಾ       Mobile App
       

Kannada Duniya

4 ನೇ ಬಾರಿಗೆ ಗದ್ದುಗೆ ಏರಲು ಬಿಜೆಪಿ ಕೂಪನ್ ಮಂತ್ರ

ವರ್ಷಾಂತ್ಯದಲ್ಲಿ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಬಿಜೆಪಿ ಭರದ ಸಿದ್ಧತೆ ನಡೆಸಿದೆ. ನಾಲ್ಕನೇ ಬಾರೀ ಮಧ್ಯ ಪ್ರದೇಶದಲ್ಲಿ ಕಮಲ ಅರಳಿಸುವ ಇರಾದೆ ಬಿಜೆಪಿಯದ್ದಾಗಿದೆ.

ನಿಧಿ ಸಂಗ್ರಹಕ್ಕೆ ಕಮಲ ಪಾಳಯ ಹೊಸ ರೂಪು ರೇಷೆ ಸಿದ್ಧಗೊಳಿಸಿದ್ದು, ಕೂಪನ್ ಮಾರಿ ಹಣ ಸಂಗ್ರಹಿಸಲು ಮುಂದಾಗಿದೆ. ಮಧ್ಯ ಪ್ರದೇಶದಲ್ಲಿ ಒಟ್ಟು 230 ವಿಧಾನ ಸಭಾ ಕ್ಷೇತ್ರಗಳಿವೆ. ಈ ಕ್ಷೇತ್ರಗಳಲ್ಲಿ ಆಗಸ್ಟ್ 1 ರಿಂದ 30ರ ವರೆಗೆ ಕೂಪನ್ ವಿತರಿಸಲಾಗುವುದು. ಅಲ್ಲದೆ ಇದ್ರಿಂದ 46 ಕೋಟಿ ರೂ. ಒಟ್ಟುಗೂಡಿಸೋ ಪ್ಲಾನ್ ಬಿಜಿಪಿ ಹಾಕಿಕೊಂಡಿದೆ. ಅಂದ್ರೆ ಒಂದು ಕ್ಷೇತ್ರದಲ್ಲಿ ಸುಮಾರು 20 ಲಕ್ಷದ ಕೂಪನ್ ಮಾರಾಟದ ಹೊಣೆಯನ್ನು ಕಾರ್ಯಕರ್ತರಿಗೆ ನೀಡಲಾಗಿದೆ.

200, 500, 1000, 2000 ರೂಪಾಯಿಯ ಕೂಪನ್ ಸಿದ್ಧಗೊಳಿಸಲಾಗಿದ್ದು, ಕಾರ್ಯಕರ್ತರಿಗೆ ನೀಡಲಾಗಿದೆ. ಬಂದ ಹಣವನ್ನು ಬಿಜಿಪಿ ಚುನಾವಣಾ ಕಾರ್ಯಗಳಿಗೆ ಬಳಸಲು ಯೋಜನೆ ರೂಪಿಸಿಕೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...