alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಟಪದಲ್ಲೇ ಅಣ್ಣನ ನೂಕಿ ತಾಳಿ ಕಟ್ಟಿದ ತಮ್ಮ

maduve-dedad

ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಅಲ್ಲದೇ ಮಂಟಪದಲ್ಲಿಯೇ ಮದುವೆ ಮುರಿದು ಹೋದ, ವಧು, ವರರು ಬದಲಾದ ಘಟನೆಗಳು ಕೂಡ ಕೆಲವೊಮ್ಮೆ ನಡೆದಿವೆ. ಆದರೆ, ಅಣ್ಣ ಮದುವೆಯಾಗಬೇಕಿದ್ದ ವಧುವಿಗೆ ತಮ್ಮ ತಾಳಿ ಕಟ್ಟಿದ ಅಪರೂಪದ ಪ್ರಕರಣ ತಮಿಳುನಾಡಿನಲ್ಲಿ ನಡೆದಿದೆ.

ವೇಲೂರು ಸಮೀಪದ ತಿರುಪತ್ತೂರಿನ ಸೆಲ್ಲಾರ್ ಪೇಟೆಯಲ್ಲಿ ಈ ಘಟನೆ ನಡೆದಿದೆ. ಇಲವಂಪಟ್ಟಿಯ ಮುರುಗನ್ ದೇವಾಲಯದಲ್ಲಿ ಮದುವೆಗೆ ಬಂಧು-ಬಾಂಧವರೆಲ್ಲಾ ಸೇರಿದ್ದರು.

ಮುಹೂರ್ತದ ವೇಳೆ ಸಮೀಪಿಸುತ್ತಿರುವಂತೆಯೇ ಮಧುಮಗ ತಾಳಿ ಕಟ್ಟಲು ವಧುವಿನ ಬಳಿ ಹೋಗುತ್ತಿದ್ದಂತೆ ಚಂಗನೆ ಜಿಗಿದು ಬಂದ ಮಧುಮಗನ ತಮ್ಮ ತಾಳಿ ಕಸಿದುಕೊಂಡು ವಧುವಿಗೆ ಕಟ್ಟಿದ್ದಾನೆ.

ಅಣ್ಣ ಮದುವೆಯಾಗಬೇಕಿದ್ದ ಯುವತಿಗೆ ಹೀಗೆ ತಮ್ಮ ತಾಳಿ ಕಟ್ಟಿದ್ದರಿಂದ ಅಲ್ಲಿದ್ದವರೆಲ್ಲಾ ಆವಾಕ್ಕಾಗಿದ್ದಾರೆ. ಅಸಲಿ ವಿಷಯ ಏನೆಂದರೆ, ಇವರು ಮೊದಲೇ ಪ್ರೀತಿಸಿದ್ದು, ಮನೆಯಲ್ಲಿ ವಿಷಯ ತಿಳಿಸಿರಲಿಲ್ಲ.

ತಾನು ಪ್ರೀತಿಸಿದ ಯುವತಿ ಅಣ್ಣನ ಮಡದಿಯಾಗುವ ಸಂದರ್ಭದಲ್ಲಿ ಆತನಿಗೆ ತಡೆಯಲು ಆಗಿಲ್ಲ. ಅಣ್ಣನನ್ನು ತಳ್ಳಿ ತಾನೇ ತಾಳಿ ಕಟ್ಟಿದ್ದಾನೆ. ಕೊನೆಗೆ ಎಲ್ಲರೂ ಮದುವೆಗೆ ಒಪ್ಪಿದ್ದಾರೆ. ಆದರೆ, ಮದುವೆಯಾಗಲು ಬಂದಿದ್ದ ವರ ಗೋಳೋ ಎಂದು ಗೋಳಾಡುತ್ತಾ ಅಲ್ಲಿಂದ ಹೊರ ನಡೆದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...