alex Certify
ಕನ್ನಡ ದುನಿಯಾ       Mobile App
       

Kannada Duniya

ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ್ರೂ ಗರ್ಭಿಣಿಯಾದ್ಲು ಮಹಿಳೆ…!

ತಮಿಳುನಾಡಿನಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆ ನಡೆದಿದೆ. ಸಂತಾನಹರಣ ಶಸ್ತ್ರಚಿಕಿತ್ಸೆ ನಂತ್ರವೂ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ ಈಗ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಆಸ್ಪತ್ರೆ, ಪರಿಹಾರವಾಗಿ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾಳೆ.

ಮಹಿಳೆ ಧನಮ್ ಅರ್ಜಿಯನ್ನು ಅಂಗೀಕರಿಸಿರುವ ಕೋರ್ಟ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕನ್ಯಾಕುಮಾರಿ ಸರ್ಕಾರಿ ವೈದ್ಯಕೀಯ ಕಾಲೇಜ್ ಆಸ್ಪತ್ರೆಗೆ ನೊಟೀಸ್ ಜಾರಿ ಮಾಡಿದೆ. ಧನಮ್, ಎರಡನೇ ಮಗುವಿನ ನಂತ್ರ ಏಪ್ರಿಲ್ 5,2014 ರಂದು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಳಂತೆ. ಆಸ್ಪತ್ರೆ ಪ್ರಮಾಣ ಪತ್ರವನ್ನೂ ನೀಡಿತ್ತಂತೆ.

ಸೆಪ್ಟೆಂಬರ್ 29,2017 ರಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದಾಗ ಧನಮ್ ಗರ್ಭಿಣಿ ಎಂಬ ಸಂಗತಿ ತಿಳಿದಿದೆ. ವೈದ್ಯರು ಸಂತಾನಹರಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿಲ್ಲ ಎಂದಿದ್ದಾರೆ. ಮೂರನೇ ಬಾರಿ ಗರ್ಭ ಧರಿಸಿದ್ದ ಧನಮ್ ಸಾಕಷ್ಟು ಸಮಸ್ಯೆ ಎದುರಿಸಬೇಕಾಯ್ತಂತೆ. ಎರಡು ಹೆಣ್ಣು ಮಕ್ಕಳಾದ ಕಾರಣ ಧನಮ್ ಕುಟುಂಬಕ್ಕೆ ಮಕ್ಕಳ ರಕ್ಷಣೆ ಯೋಜನೆ ಲಾಭ ಸಿಗ್ತಿತ್ತಂತೆ. ಆದ್ರೆ ಮೂರನೇ ಮಗು ಕೂಡ ಹೆಣ್ಣಾಗಿದ್ದು, ಈಗ ಯೋಜನೆ ಲಾಭ ಸಿಗ್ತಿಲ್ಲ. ಹಾಗಾಗಿ ಆಸ್ಪತ್ರೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಧನಮ್ ಅರ್ಜಿಯಲ್ಲಿ ಹೇಳಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...