alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಶಾಲೆ ಮಕ್ಕಳಿಗೆ ಸಿಗಲಿದೆ ಗೋಲ್ಡ್ ಕಾಯಿನ್ ಅಥವಾ 5000 ನಗದು..!?

ಸರ್ಕಾರಿ ಶಾಲೆಗಳಿಗೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಕಡಿಮೆ ಮಕ್ಕಳಿರುವ ಕಾರಣ ಕೆಲ ಶಾಲೆಗಳ ಬಾಗಿಲು ಮುಚ್ಚಲಾಗ್ತಿದೆ. ತಮಿಳುನಾಡಿನ ಗ್ರಾಮವೊಂದರ ಗ್ರಾಮಸ್ಥರು ಪ್ರಾಥಮಿಕ ಶಾಲೆ ಮುಚ್ಚದಿರಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ವಿಭಿನ್ನ ಯೋಜನೆ ಶುರು ಮಾಡಿದ್ದಾರೆ.

ಸರ್ಕಾರಿ ಪ್ರಾಥಮಿಕ ಶಾಲೆಗೆ ಎಡ್ಮಿಷನ್ ಮಾಡಿಸುವ ಮಕ್ಕಳಿಗೆ ಬಂಗಾರದ ನಾಣ್ಯ ಅಥವಾ 5 ಸಾವಿರ ರೂಪಾಯಿ ನಗದು ನೀಡಲು ಮುಂದಾಗಿದ್ದಾರೆ. ಜೊತೆಗೆ ಎರಡು ಸೆಟ್ ಸಮವಸ್ತ್ರ ಕೂಡ ವಿದ್ಯಾರ್ಥಿಗಳಿಗೆ ಸಿಗಲಿದೆ. 1996ರಲ್ಲಿ  ಈ ಶಾಲೆ ಶುಭಾರಂಭಗೊಂಡಿತ್ತು. 165 ಮಕ್ಕಳು ಶಾಲೆಯಲ್ಲಿ ಓದುತ್ತಿದ್ದರು. ಈಗ ಮಕ್ಕಳ ಸಂಖ್ಯೆ 10ಕ್ಕಿಳಿದಿದೆ.

ಗ್ರಾಮದಲ್ಲಿ ಈಗ ಕೇವಲ 65 ಕುಟುಂಬವಿದೆ. ಗ್ರಾಮಸ್ಥರ ಈ ನಿರ್ಧಾರದ ನಂತ್ರ 3 ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಗೆ ಬಂದಿದ್ದಾರೆ. ಮತ್ತೆ ಮೂವರು ವಿದ್ಯಾರ್ಥಿಗಳು ಶಾಲೆಗೆ ಬರಲು ಆಸಕ್ತಿ ತೋರಿದ್ದಾರೆ. 10 ಮಕ್ಕಳಿಗಿಂತ ಕಡಿಮೆ ಇರುವ ಶಾಲೆಯನ್ನು ಮುಚ್ಚಬೇಕೆಂಬ ಆದೇಶವಿದೆ. ಶಾಲೆ ಬಾಗಿಲು ಹಾಕುವುದು ಗ್ರಾಮಸ್ಥರಿಗೆ ಇಷ್ಟವಿಲ್ಲ. ಹಾಗಾಗಿ ಗ್ರಾಮಸ್ಥರು ಹಣ, ನಾಣ್ಯ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಮದ ವ್ಯಾಪಾರಿಯೊಬ್ಬರು ಬಂಗಾರದ ನಾಣ್ಯ ನೀಡಲು ಮುಂದೆ ಬಂದಿದ್ದಾರೆ. ಸೆಲ್ವರಾಜ್ ಎಂಬುವವರು 5 ಸಾವಿರ ರೂಪಾಯಿ ನೀಡುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...