alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲಾ ಮಕ್ಕಳಿಗಾಗಿ ಆಭರಣವನ್ನೇ ಮಾರಿದ ಶಿಕ್ಷಕಿ

teacher

ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಭವಿಷ್ಯದ ಪ್ರಜೆಗಳನ್ನು ತಿದ್ದಿತೀಡಿ ಬೆಳೆಸುವವರು ಶಿಕ್ಷಕರೇ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ನೀರೆರೆದು ಪೋಷಿಸುವ ಕೆಲಸ ಕೂಡ ಶಿಕ್ಷಕರಿಂದ್ಲೇ ಆಗುತ್ತಿದೆ. ಆದ್ರೆ ಗ್ರಾಮಾಂತರ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯದ ಕೊರತೆಯಿಂದಾಗಿ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರೆಯುತ್ತಿಲ್ಲ.

ಆದ್ರೆ ತಮಿಳುನಾಡಿನ ವಿಲ್ಲುಪುರಂನಲ್ಲಿ ಶಿಕ್ಷಕಿಯೊಬ್ಬರು ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿಸಲು ತಮ್ಮಿಂದಾದ ಸಕಲ ಪ್ರಯತ್ನವನ್ನೂ ಮಾಡ್ತಿದ್ದಾರೆ. ಅನ್ನಪೂರ್ಣ ಮೋಹನ್ ಎಂಬ ಶಿಕ್ಷಕಿ ಮಕ್ಕಳಿಗೆ ಬೇಕಾದ ಇಂಗ್ಲಿಷ್ ಪುಸ್ತಕಗಳು, ಪೀಠೋಪಕರಣಗಳು, ಕಲಿಕೆಗೆ ಸಹಾಯಕವಾದ ಬೋರ್ಡ್ ಗಳನ್ನು ಒದಗಿಸಿದ್ದಾರೆ.

skit

ಇವನ್ನೆಲ್ಲ ಮಕ್ಕಳಿಗಾಗಿ ಖರೀದಿ ಮಾಡಲು ತಮ್ಮ ಆಭರಣಗಳನ್ನೇ ಅನ್ನಪೂರ್ಣ ಮಾರಾಟ ಮಾಡಿದ್ದಾರೆ. ಪಾಠವನ್ನೆಲ್ಲ ಸ್ಕಿಟ್ ಗಳ ಮೂಲಕ ಮಕ್ಕಳಿಗೆ ಹೇಳಿಕೊಡ್ತಿದ್ದಾರೆ. ಈ ವಿಡಿಯೋವನ್ನು ಶಿಕ್ಷಕಿ, ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಶಿಕ್ಷಕಿ ಅನ್ನಪೂರ್ಣ ಈ ಮೂಲಕ ಸಮಾಜಕ್ಕೆ ಮಾದರಿಯಾಗುವಂತಹ ಕಾರ್ಯ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...