alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಮಾಡಿದ ತಪ್ಪಿಗೆ ಪಾಪದ ಪತ್ನಿಯ ಕೈ ಕತ್ತರಿಸಿದ ಆಸಾಮಿ

ತಮಿಳುನಾಡಿನಲ್ಲಿ 40 ವರ್ಷದ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳ ಬೆರಳುಗಳು ಹಾಗೂ ಕೈಯನ್ನೇ ಕತ್ತರಿಸಿ ಹಾಕಿದ್ದಾನೆ. ಆಕೆಯ ಪತಿ, ಆರೋಪಿ ಶಂಕರ್ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನಂತೆ. ಪತಿ ಮಾಡಿದ ತಪ್ಪಿಗೆ ಪಾಪದ ಪತ್ನಿ ಕೈಯನ್ನೇ ಕಳೆದುಕೊಂಡಿದ್ದಾಳೆ.

ಶಂಕರ್ ಖಾಸಗಿ ಕಂಪನಿಯೊಂದರಲ್ಲಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದಾನೆ. ಶಂಕರ್ ಹಾಗೂ ಸತ್ಯ ದಂಪತಿ ಸೆಲ್ಲೈಮನ್ ನಗರದಲ್ಲಿ ವಾಸವಾಗಿದ್ದು, ಅವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಟೈಲರ್ ಆಗಿರೋ ಶೇಖ್ ಮತ್ತವನ ಪತ್ನಿ ಶಕೀಲಾ ಕೂಡ ಅದೇ ಏರಿಯಾದಲ್ಲೇ ನೆಲೆಸಿದ್ದಾರೆ.

ಸುಮಾರು 2 ವರ್ಷಗಳಿಂದ ಸತ್ಯ ಹಾಗೂ ಶೇಖ್ ಮಧ್ಯೆ ಅಕ್ರಮ ಸಂಬಂಧವಿತ್ತು ಅನ್ನೋ ಆರೋಪವಿದೆ. ಹಲವು ಬಾರಿ ಶಂಕರ್ ಪತ್ನಿಗೆ ಎಚ್ಚರಿಕೆಯನ್ನೂ ನೀಡಿದ್ದ. ಮಾರ್ಚ್ 15ರಂದು ಸತ್ಯ, ಶೇಖ್ ಜೊತೆಗಿರೋದನ್ನು ನೋಡಿ ಶಂಕರ್ ಕೆರಳಿಬಿಟ್ಟಿದ್ದ.

ಎರಡು ದಿನಗಳ ಬಳಿಕ ಕಂಠಪೂರ್ತಿ ಕುಡಿದು ಬಂದ ಶಂಕರ್, ಶಕೀಲಾ ಜೊತೆಗೆ ಜಗಳ ತೆಗೆದಿದ್ದಾನೆ. ನಂತರ ಚಾಕುವಿನಿಂದ ಅವಳ ಬಲಗೈ ಹಾಗೂ ಎಡಗೈನ 4 ಬೆರಳುಗಳನ್ನು ಕತ್ತರಿಸಿ ಹಾಕಿದ್ದಾನೆ. ಘಟನೆ ಬಳಿಕ ಪರಾರಿಯಾಗಿದ್ದ ಶಂಕರ್ ನನ್ನು ಪೊಲೀಸರು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...