alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನಮ್ಮ ಜೈಲಿಗೆ : ಬದಲಾಯ್ತು ಲೆಕ್ಕಾಚಾರ

natr

ಚೆನ್ನೈ: ಶಶಿಕಲಾ ಅಪರಾಧಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದರಿಂದ ತಮಿಳುನಾಡು ರಾಜಕೀಯ ಲೆಕ್ಕಾಚಾರಗಳೆಲ್ಲಾ ಬದಲಾಗಿವೆ.

ಇಷ್ಟು ದಿನಗಳ ಕಾಲ ಪ್ರಬಲರಂತೆ ಕಂಡು ಬಂದಿದ್ದ ಶಶಿಕಲಾಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್ 4 ವರ್ಷ ಜೈಲು ಶಿಕ್ಷೆ ಹಾಗೂ 10 ಕೋಟಿ ರೂ. ದಂಡ ವಿದಿಸಿ ತೀರ್ಪು ನೀಡಿದೆ.

ಮುಖ್ಯಮಂತ್ರಿಯಾಗಲು ತುದಿಗಾಲಲ್ಲಿ ನಿಂತಿದ್ದ ಶಶಿಕಲಾ ನಟರಾಜನ್ ಅವರಿಗೆ ಭಾರೀ ಹಿನ್ನಡೆಯಾಗಿದೆ. ಅವರು 10 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎನ್ನಲಾಗಿದ್ದು, ಇದರಿಂದಾಗಿ ಅವರ ರಾಜಕೀಯ ಭವಿಷ್ಯಕ್ಕೆ ಹಿನ್ನಡೆಯಾಗಿದೆ.

ಶಶಿಕಲಾ ವಿರುದ್ಧ ತೀರ್ಪು ಪ್ರಕಟವಾಗಿರುವುದರಿಂದ ಅವರ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಶಾಸಕರು ಪನ್ನೀರ್ ಸೆಲ್ವಂ ಕ್ಯಾಂಪ್ ನತ್ತ ಮುಖ ಮಾಡಿದ್ದಾರೆ.

ಈ ನಡುವೆ ಶಶಿಕಲಾ ತಮ್ಮ ವಿರುದ್ಧ ತೀರ್ಪು ಬಂದ ಹಿನ್ನಲೆಯಲ್ಲಿ ತಮ್ಮ ನಂಬಿಕಸ್ಥರಲ್ಲಿ ಒಬ್ಬರಿಗೆ ಸಿ.ಎಂ. ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...