alex Certify
ಕನ್ನಡ ದುನಿಯಾ       Mobile App
       

Kannada Duniya

ಪನ್ನೀರ್ ಪಾಳಯಕ್ಕೆ ಜಿಗಿದ 65 ಶಾಸಕರು

paner-sd

ಚೆನ್ನೈ: ದಿನಕ್ಕೊಂದು, ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ರಾಜಕೀಯ ನಡೆಗಳಿಂದ, ತಮಿಳುನಾಡು ದೇಶದ ಗಮನ ಸೆಳೆದಿದೆ.

ಇಷ್ಟು ದಿನ ಹೆಚ್ಚಿನ ಬೆಂಬಲಿಗರನ್ನು ಹೊಂದಿದ್ದ ವಿ.ಕೆ. ಶಶಿಕಲಾ ನಟರಾಜನ್ ಅವರಿಗೆ ಭಾರೀ ಹಿನ್ನಡೆಯಾಗತೊಡಗಿದೆ.

ಶಶಿಕಲಾ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಎ.ಐ.ಎ.ಡಿ.ಎಂ.ಕೆ.ಯ 65 ಶಾಸಕರು, ಪನ್ನೀರ್ ಸೆಲ್ವಂಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ರೆಸಾರ್ಟ್ ನಿಂದ ಹೊರ ಬಂದ ಕೂಡಲೇ ಶಾಸಕರು ಸುದ್ದಿಗೋಷ್ಠಿ ನಡೆಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿದ್ದಾರೆ. ಪಕ್ಷದ ವಕ್ತಾರ ಹಾಗೂ ಮಾಜಿ ಸಚಿವ ಪೊನ್ನಯನ್ ಸೇರಿದಂತೆ ಅನೇಕ ನಾಯಕರು ಪನ್ನೀರ್ ಸೆಲ್ವಂ ಅವರನ್ನು ಬೆಂಬಲಿಸಿದ್ದಾರೆ.

ರೆಸಾರ್ಟ್ ನಲ್ಲಿರುವ ಶಾಸಕರನ್ನು ರಾಜಭವನಕ್ಕೆ ಕರೆತಂದು, ರಾಜ್ಯಪಾಲರ ಎದುರು ಪರೇಡ್ ನಡೆಸಲು ಶಶಿಕಲಾ ಬಣ ಸಿದ್ಧತೆ ನಡೆಸಲು ಮುಂದಾಗಿದ್ದರಿಂದ ರಾಜಭವನದ ಎದುರು ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...