alex Certify
ಕನ್ನಡ ದುನಿಯಾ       Mobile App
       

Kannada Duniya

ತಮಿಳುನಾಡು ಶಾಸಕರ ಸಂಬಳ ಶೇ.99.9ರಷ್ಟು ಹೆಚ್ಚಳ

download

ತಮಿಳುನಾಡು ಶಾಸಕರಿಗೆ ಬಂಪರ್ ಆಫರ್ ಸಿಕ್ಕಿದೆ. ತಮಿಳುನಾಡು ಸರ್ಕಾರ ತಮಿಳುನಾಡು ಜನಪ್ರತಿನಿಧಿಗಳ ಸಂಬಳವನ್ನು ಹೆಚ್ಚಳ ಮಾಡಿದೆ. ಶೇಕಡಾ 99.9 ರಷ್ಟು ಸಂಬಳ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಸಂಬಳ ಹೆಚ್ಚಳ ಜನಪ್ರತಿನಿಧಿಗಳ ಮೊಗದಲ್ಲಿ ನಗು ಮೂಡಿಸಿದೆ.

ಸಾಲ ಮನ್ನಾ ಮಾಡುವಂತೆ ಅನೇಕ ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಅರೆ ಬೆತ್ತಲೆ ಪ್ರತಿಭಟನೆ ಕೂಡ ಮಾಡಿದ್ದಾರೆ. ಸಾಲ ಮಾಡಿ ಬೆಳೆ ಬೆಳೆದಿದ್ದ ಅನೇಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರಿಗೆ ಕರುಣೆ ತೋರದ ಸರ್ಕಾರ ಜನಪ್ರತಿನಿಧಿಗಳ ಸಂಬಳ ಹೆಚ್ಚಿಸಿದೆ. 55 ಸಾವಿರವಿದ್ದ ಸಂಬಳ 1 ಲಕ್ಷದ 10 ಸಾವಿರವಾಗಿದೆ.

ತಮಿಳು ಸರ್ಕಾರದ ಈ ನಿರ್ಧಾರ ರಾಜ್ಯದ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಮೊದಲು ರೈತರ ಸಮಸ್ಯೆ ಆಲಿಸಿ ನಂತ್ರ ನಿಮ್ಮ ಸಂಬಳ ಹೆಚ್ಚಳ ಮಾಡಿಕೊಳ್ಳಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...