alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಂಡತಿ ಮಾತು ಬಿಟ್ಟಳೆಂದು ಕಾರಿಗೆ ಬೆಂಕಿ ಇಟ್ಟ…!

ತಿರುಚನಾಪಳ್ಳಿ: ಉದ್ಯೋಗವಿಲ್ಲದವ ಇನ್ನೇನೋ ಕೆತ್ತಿದ್ದನಂತೆ ಎಂಬ ಗ್ರಾಮೀಣ ಮಾತಿದೆ. ಅದೇ ರೀತಿ ತಮಿಳುನಾಡಿನ ತಿರುಚನಾಪಳ್ಳಿಯಲ್ಲೊಬ್ಬ ಕೆಲಸವಿಲ್ಲದೇ ತನ್ನ ಕಾರು, ದ್ವಿಚಕ್ರ ವಾಹನ ಮತ್ತು ಕಟ್ಟಡಕ್ಕೆ ಬೆಂಕಿ ಇಟ್ಟಿದ್ದಾನೆ. ಇದೀಗ ಆತ ಪೊಲೀಸರ ಅತಿಥಿಯಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಮೂವತ್ತು ವರ್ಷದ ಆ ವ್ಯಕ್ತಿಗೆ ಕೆಲವು ದಿನಗಳಿಂದ ಕೆಲಸವಿರಲಿಲ್ಲ. ಬೇರೆ ಉದ್ಯೋಗ ಹುಡುಕಲು ನಿರಾಸಕ್ತಿ ತಾಳಿದ್ದ ಎನ್ನಲಾಗಿದ್ದ. ಈ ಕಾರಣಕ್ಕೆ ಆತನ ಪತ್ನಿ ಕೆಲವು ದಿನಗಳಿಂದ ಮಾತು ಬಿಟ್ಟಿದ್ದಳು.

ಇದರಿಂದ ಅಸಮಾಧಾನಗೊಂಡ ಆತ ಕುಡಿದ ಮತ್ತಿನಲ್ಲಿ ಕಾರು, ದ್ವಿಚಕ್ರ ವಾಹನ, ಕಟ್ಟಡಕ್ಕೆ ಬೆಂಕಿ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿ ಟಿವಿ ಫುಟೇಜ್ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...