alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಹತ್ಯೆಗೈದು ತಾನೂ ಆತ್ಮಹತ್ಯೆಗೆತ್ನಿಸಿದ ಹೆಚ್ಐವಿ ಪೀಡಿತ ವ್ಯಕ್ತಿ

ಕೆಲ ವರ್ಷಗಳ ಹಿಂದಿನಿಂದ ಎಚ್ಐವಿ ಪೀಡಿತನಾಗಿದ್ದ ವ್ಯಕ್ತಿಯೊಬ್ಬ ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

37 ವರ್ಷದ ದಿನಗೂಲಿ ನೌಕರ ಶಿಖರನ್ ಎಂಬಾತ ಬಲವಂತದಿಂದ ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿದ್ದಾನೆ. ಪರಿಣಾಮ 15 ಮತ್ತು 12 ವರ್ಷದ ಹೆಣ್ಣು ಮಕ್ಕಳು ಮೃತಪಟ್ಟಿದ್ದು ಶಿಖರನ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ತಮಿಳುನಾಡಿನ ಸೆಂಗುಲಮ್ ನ ಅಂತಿಯೂರ್ ರಕ್ಷಿತಾರಣ್ಯದಲ್ಲಿ ದಿನಗೂಲಿ ನೌಕರನಾಗಿದ್ದ ಶಿಖರನ್ ಪತ್ನಿ ಏಳು ವರ್ಷಗಳ ಹಿಂದೆ ಆತನನ್ನು ಬಿಟ್ಟು ಹೋಗಿದ್ದಾಳೆ. ಮಕ್ಕಳೊಂದಿಗೆ ವಾಸವಿದ್ದ ಶಿಖರನ್ ಇತ್ತೀಚೆಗೆ ಸಾಕಷ್ಟು ಖಿನ್ನತೆಯಿಂದ ಬಳಲುತ್ತಿದ್ದ ಅಂತ ಹೇಳಲಾಗ್ತಿದೆ.

ತನ್ನ ನಂತರ ಮಕ್ಕಳು ಅನಾಥರಾಗುತ್ತಾರಲ್ಲ ಅನ್ನೋ ಚಿಂತೆಯಲ್ಲಿ ಶಿಖರನ್ ಆಹಾರದಲ್ಲಿ ವಿಷ ಬೆರೆಸಿ ಮಕ್ಕಳಿಗೆ ತಿನ್ನಿಸಿ ತಾನೂ ತಿಂದಿದ್ದಾನೆ. ಮೂವರು ಪ್ರಜ್ಞಾಶೂನ್ಯರಾಗಿ ಬಿದ್ದಿರೋದನ್ನ ಕಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ. ಅಂತಿಯೂರ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಖರನ್ ನ ಪರಿಸ್ಥಿತಿ ಗಂಭೀರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...