alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಮಂತ್ರಿಯ ಪುತ್ರನ ಮನೆಯಲ್ಲಿದ್ದಾಳೆ ಈತನ ಪತ್ನಿ…!

ಪತ್ನಿಯನ್ನು ಉನ್ನತ ವ್ಯಾಸಂಗಕ್ಕೆಂದು ಕಳುಹಿಸಿದ ಪತಿಯೊಬ್ಬ ಈಗ ಪರಿತಪಿಸುತ್ತಿದ್ದಾನೆ. ಎರಡು ಮಕ್ಕಳ ತಂದೆಯಾಗಿರುವ ಈತ, ತನ್ನ ಪತ್ನಿಯನ್ನು ಈಗ ಮಾಜಿ ಮಂತ್ರಿಯ ಪುತ್ರನೊಬ್ಬ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದು ಆಕೆಯನ್ನು ಬಿಡುಗಡೆಗೊಳಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾನೆ.

2011ರಲ್ಲಿ ವಿವಾಹವಾಗಿದ್ದ ಚೆನ್ನೈನ ವೆಲಚ್ಚರಿ ನಿವಾಸಿ ವಿಜಯ್ ರಾಜೇಶ್ ಕುಮಾರ್ ಎಂಬಾತ, ತನ್ನ ಪತ್ನಿ 2 ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ ಮುಂದೆ ಓದಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದ ಕಾರಣ, ಆಕೆಯನ್ನು ಚೆನ್ನೈನ ತಾರಾಮಣಿಯಲ್ಲಿರುವ ಸ್ಕೂಲ್ ಆಫ್ ಎಕ್ಸಲೆನ್ಸ್ ಇನ್ ಲಾ ಕಾಲೇಜಿಗೆ ಸೇರಿಸಿದ್ದ.

ಇದೀಗ ಆಕೆ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ವೇಳೆ ತನ್ನ ಸಹಪಾಠಿ ಮಾಜಿ ಮಂತ್ರಿಯೊಬ್ಬನ ಪುತ್ರನೊಂದಿಗೆ ಸಂಬಂಧ ಬೆಳೆಸಿದ್ದಾಳೆಂದು ಹೇಳಲಾಗಿದೆ. ಮಕ್ಕಳನ್ನೂ ಮರೆತು ಆತನೊಂದಿಗೆ ವಾಸಿಸುತ್ತಿರುವ ಕಾರಣ ನೊಂದ ಪತಿ ಇದೀಗ ಕೋರ್ಟ್ ಮೆಟ್ಟಿಲೇರಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...