alex Certify
ಕನ್ನಡ ದುನಿಯಾ       Mobile App
       

Kannada Duniya

ದೇವರ ಸನ್ನಿಧಿಯಲ್ಲೇ ದುರಂತ ಸಾವು

ತಮಿಳುನಾಡಿನ ದೇವಾಲಯವೊಂದರಲ್ಲಿ ಆಕಸ್ಮಿಕವಾಗಿ 2400 ಅಡಿ ಮೇಲಿನಿಂದ  ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ತಿರುಚಿಯಲ್ಲಿರೋ ಈ ದೇವಾಲಯ ನೆಲದಿಂದ ಬರೋಬ್ಬರಿ 2400 ಅಡಿ ಎತ್ತರದಲ್ಲಿದೆ. ವ್ಯಕ್ತಿ ಕೆಳಕ್ಕೆ ಬೀಳ್ತಾ ಇರೋ ದೃಶ್ಯವನ್ನು ಪ್ರತ್ಯಕ್ಷದರ್ಶಿಗಳು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಆಟೋ ಚಾಲಕ ಆರ್ಮುಗಂ ಎಂಬಾತ ದೇವರ ದರ್ಶನಕ್ಕಾಗಿ ಬಂದಿದ್ದ. ತಲಮಲೈ ಪರ್ವತದಲ್ಲಿರೋ ಈ ದೇವಾಲಯದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ. ಮೂರನೇ ಸುತ್ತು ಪ್ರದಕ್ಷಿಣೆ ಹಾಕುತ್ತಿರುವ ಸಂದರ್ಭದಲ್ಲಿ ಅರಿವಿಲ್ಲದಂತೆಯೇ ದೇವಾಲಯದ ತುತ್ತ ತುದಿಗೆ ಬಂದುಬಿಟ್ಟಿದ್ದಾನೆ.

ತಾನು ಜಾರಿ ಬೀಳಬಹುದು ಎಂದುಕೊಳ್ಳುವಷ್ಟರಲ್ಲಿಯೇ ನಿಯಂತ್ರಣ ತಪ್ಪಿ 2400 ಅಡಿ ಮೇಲಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಈ ದೇವಾಲಯದಲ್ಲಿ ಇಂತಹ ಅಪಾಯ ಸಂಭವಿಸಬಹುದು ಅನ್ನೋ ಕಾರಣಕ್ಕೆ ಪ್ರದಕ್ಷಿಣೆ ಹಾಕದಂತೆ ನಿರ್ಬಂಧಿಸಲಾಗಿದೆ. ಆದರೂ ಭಕ್ತರು ಅದನ್ನು ಪಾಲಿಸುತ್ತಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...