alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯನ್ನು ಹತ್ಯೆ ಮಾಡುವ ಮುನ್ನ ನೋಡಿದ್ದ 52 ವಿಡಿಯೋ

ಪತ್ನಿಯ ನಡತೆ ಮೇಲೆ ಅನುಮಾನಗೊಂಡ ವ್ಯಕ್ತಿಯೊಬ್ಬ ಹೆಂಡತಿಯನ್ನು ಕೊಲ್ಲೋದಕ್ಕಾಗಿಯೇ 52 ವಿಡಿಯೋಗಳನ್ನು ನೋಡಿದ್ದ ಶಾಕಿಂಗ್ ವಿಚಾರ ಈಗ ಬೆಳಕಿಗೆ ಬಂದಿದೆ. ಘಟನೆಯ ಸಂಬಂಧ 34 ವರ್ಷದ ಡಿ. ರಾಮ್ ದಾಸ್ ಎಂಬ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ರಾಮ್ ದಾಸ್ 20 ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದ. ನಾಲ್ಕು ವರ್ಷಗಳ ಹಿಂದೆ ಆತನಿಗೆ ತಮಿಳುನಾಡಿದ ತಿರುಪಾಲಾ ಪಂಡಾಲ್ ಮೂಲದ ಪುಷ್ಪಾ ಎಂಬ ಯುವತಿಯೊಂದಿಗೆ ಮದುವೆಯಾಗಿತ್ತು.

ಈ ದಂಪತಿಗೆ ಎರಡು ವರ್ಷದ ಮುದ್ದಾದ ಮಗಳಿದ್ದಾಳೆ. ನಾಲ್ಕು ತಿಂಗಳ ಹಿಂದೆ ಮಗುವಿನ ಸಮೇತ ದಂಪತಿ ತಮಿಳುನಾಡಿನ ಇರುಕುಂಡಿಯ ವಿಲ್ಲಪುರಂಗೆ ಬಂದಿದ್ದರು. ಯಾಕಂದ್ರೆ ತನ್ನ ಪತ್ನಿ ಪರಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆ ಅಂತ ರಾಮ್ ದಾಸ್ ಗೆ ಅನುಮಾನ ಬಂದು ಪತ್ನಿಯೊಂದಿಗೆ ತನ್ನ ಊರಿಗೆ ಬಂದಿದ್ದ.

ಊರಿಗೆ ಬಂದ ನಂತರ ಅವನ ಅನುಮಾನ ಇನ್ನಷ್ಟು ಹೆಚ್ಚಾಗಿ ಪತ್ನಿಯೊಂದಿಗೆ ನಿತ್ಯವೂ ಜಗಳವಾಡುತ್ತಿದ್ದ. ಕೊನೆಗೆ ಆಕೆಯನ್ನ ಕೊಲ್ಲೋದಕ್ಕೆ ನಿರ್ಧರಿಸಿ ತನ್ನ ಸ್ಮಾರ್ಟ್ ಫೋನ್ ನಲ್ಲಿ ಕೊಲೆ ಮಾಡಿ ಹೇಗೆ ತಪ್ಪಿಸಿಕೊಳ್ಳೋದು ಎಂಬ ವಿಡಿಯೋಗಳನ್ನ ಡೌನ್ಲೋಡ್ ಮಾಡಿಕೊಂಡು ನೋಡುತ್ತಿದ್ದ. ಅದರಲ್ಲೂ ಪತ್ನಿಯನ್ನ ನೀರಿನಲ್ಲಿ ಮುಳುಗಿಸಿ ಕೊಲ್ಲೋದೇ ಅವನ ಉದ್ದೇಶವಾಗಿದ್ದರಿಂದ ಅಂತಹ ವಿಡಿಯೋಗಳನ್ನೇ ನೋಡುತ್ತಿದ್ದ.

ಆ ಪ್ರಕಾರ ಇತ್ತೀಚೆಗೆ ಪುಷ್ಪಾಳ ಮೃತದೇಹ ಕೊಳವೊಂದರಲ್ಲಿ ಪತ್ತೆಯಾಗಿತ್ತು. ವಿಚಾರಣೆ ಆರಂಭಿಸಿದ ಪೊಲೀಸರು ರಾಮ್ ದಾಸ್ ಮೇಲೆ ಮೊದಲು ಅನುಮಾನ ವ್ಯಕ್ತಪಡಿಸಿದ್ದಾರೆ. ಆನಂತರದಲ್ಲಿ ಅವನ ಸೆಲ್ ಫೋನ್ ನ ಪರಿಶೀಲನೆ ನಡೆಸಿದಾಗ ಅದರಲ್ಲಿ ಸಾಕಷ್ಟು ವಿಡಿಯೋಗಳು ಡಿಲೀಟ್ ಆಗಿರೋದನ್ನ ಅವರು ಗಮನಿಸಿದ್ದಾರೆ.

ತಂತ್ರಜ್ಞಾನದ ಸಹಾಯದಿಂದ ಡಿಲೀಟ್ ಆದ ವಿಡಿಯೋಗಳ ಬ್ಯಾಕ್ಅಪ್ ಪಡೆದ ಪೊಲೀಸರಿಗೆ ಪತಿಯೇ ಆರೋಪಿ ಎಂದು ತಿಳಿದು ಬಂದಿದೆ. ಆನಂತರ ಅರೋಪಿಯನ್ನ ವಿಚಾರಣೆಗೆ ಒಳಪಡಿಸಿದಾಗ ಆತ ಸತ್ಯ ಒಪ್ಪಿಕೊಂಡಿದ್ದಾನೆ. ರಾಮ್ ದಾಸ್ ನನ್ನು ಬಂಧಿಸಿರುವ ಪೊಲೀಸರು ಆತನನ್ನ ಕಸ್ಡಡಿಗೆ ತೆಗೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...