alex Certify
ಕನ್ನಡ ದುನಿಯಾ       Mobile App
       

Kannada Duniya

ಆವನೀಪುರಂನಲ್ಲಿ ಆರಂಭವಾಯ್ತು ಜಲ್ಲಿಕಟ್ಟು

jali

ಚೆನ್ನೈ: ನಿರ್ಬಂಧ ತೆರವುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ, ಮಧುರೈ ಜಿಲ್ಲಾಡಳಿತದ ವತಿಯಿಂದ ಅಧಿಕೃತವಾಗಿ ಜಲ್ಲಿಕಟ್ಟು ಆಯೋಜಿಸಲಾಗಿದೆ.

ಮಧುರೈ ಜಿಲ್ಲೆಯ ಆವನೀಪುರಂನಲ್ಲಿ ಆಯೋಜಿಸಿರುವ ಜಲ್ಲಿಕಟ್ಟು ವೀಕ್ಷಣೆಗೆ ದೇಶ, ವಿದೇಶಗಳಿಂದಲೂ ಅಪಾರ ಸಂಖ್ಯೆಯ ಜನ ಆಗಮಿಸಿದ್ದಾರೆ.

900 ಗೂಳಿಗಳು, 750 ಕ್ಕೂ ಅಧಿಕ ಗೂಳಿ ಹಿಡಿಯುವವವರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಎಲ್ಲರ ಆರೋಗ್ಯ ತಪಾಸಣೆ ನಡೆಸಲಾಗಿದೆ.

ಗೂಳಿ ಹಿಡಿಯುವವರಿಗೆ ಸಮವಸ್ತ್ರ ನೀಡಲಾಗಿದ್ದು, ಸಾರ್ವಜನಿಕರು ಅಂಗಳಕ್ಕೆ ಪ್ರವೇಶಿಸದಂತೆ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ವೀಕ್ಷಣೆಗಾಗಿ ವಿಶೇಷ ಗ್ಯಾಲರಿ ನಿರ್ಮಿಸಲಾಗಿದೆ.

ಇದರೊಂದಿಗೆ ಸ್ಥಳದಲ್ಲಿ 10 ಅಂಬುಲೆನ್ಸ್ ಗಳು, ಮೊಬೈಲ್ ಐ.ಸಿ.ಯು. ವ್ಯವಸ್ಥೆ ಮಾಡಲಾಗಿದೆ.

ಮಧುರೈ ಜಿಲ್ಲಾಧಿಕಾರಿ ವೀರರಾಘವ ರಾವ್ ಅವರು ಸ್ಪರ್ಧೆಗೆ ಚಾಲನೆ ನೀಡಿದ್ದಾರೆ. 2 ವರ್ಷದ ಬಳಿಕ ಅಧಿಕೃತವಾಗಿ ಆರಂಭವಾಗಿರುವ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಕ್ರೀಡೆಗೆ ವಿಶೇಷ ಮೆರುಗು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...