alex Certify
ಕನ್ನಡ ದುನಿಯಾ       Mobile App
       

Kannada Duniya

ಶಶಿಕಲಾಗೆ ಕೊಕ್, ಪನ್ನೀರ್ ಮತ್ತೆ ಸಿ.ಎಂ…?

palani-cm-s

ಚೆನ್ನೈ: ಸರ್ಕಾರ ಮತ್ತು ಪಕ್ಷದಲ್ಲಿ ಮನ್ನಾರ್ ಗುಡಿ ಕುಟುಂಬದ ಹಸ್ತಕ್ಷೇಪ, ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಸಿ.ಎಂ. ಎಡಪ್ಪಾಡಿ ಪಳನಿಸ್ವಾಮಿ ಶಾಸಕರ ಸಲಹೆಯಂತೆ ಒ. ಪನ್ನೀರ್ ಸೆಲ್ವಂ ಬಣದೊಂದಿಗೆ ಕೈ ಜೋಡಿಸಲಿದ್ದಾರೆ.

ಎ.ಐ.ಎ.ಡಿ.ಎಂ.ಕೆ.ಯ ಎರಡೂ ಬಣಗಳು ವಿಲೀನವಾಗಲಿದ್ದು, ಶಶಿಕಲಾ ಮತ್ತು ಅವರ ಕುಟುಂಬದವರನ್ನು ಪಕ್ಷದಿಂದ ದೂರವಿಡಲು ತೀರ್ಮಾನಿಸಲಾಗಿದೆ.

ಉಭಯ ಬಣಗಳ ನಾಯಕರು ಮತ್ತು ಶಾಸಕರು ಇದಕ್ಕೆ ಒಪ್ಪಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಹುದ್ದೆಯನ್ನು ಪನ್ನೀರ್ ಸೆಲ್ವಂಗೆ ನೀಡಲು ಹೆಚ್ಚಿನ ಶಾಸಕರು ಒಲವು ತೋರಿದ್ದಾರೆ.

ಇದಾಗದಿದ್ದರೆ, ಪಳನಿಸ್ವಾಮಿ ಅಥವಾ ಪನ್ನೀರ್ ಸೆಲ್ವಂ ಅವರಲ್ಲಿ ಒಬ್ಬರು ಪಕ್ಷದ ಹಾಗೂ ಮತ್ತೊಬ್ಬರು ಸರ್ಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ. ಜೊತೆಗೆ ಶಶಿಕಲಾ ಮತ್ತು ಅವರ ಕುಟುಂಬದವರನ್ನು 2012 ರಲ್ಲಿ ಜಯಲಲಿತಾ ಅವರು ದೂರ ಇಟ್ಟಿದ್ದ ರೀತಿಯಲ್ಲೇ ಹೊರಗಿಡಬೇಕೆಂದು ಚಿಂತಿಸಲಾಗಿದೆ.

ಈ ದಿಢೀರ್ ಬೆಳವಣಿಗೆಗಳಿಂದ ವಿಚಲಿತರಾಗಿರುವ ಶಶಿಕಲಾ ಎ.ಐ.ಎ.ಡಿ.ಎಂ.ಕೆ. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಲು ತೀರ್ಮಾನ ಕೈಗೊಂಡಿದ್ದಾರೆ. ಬೆಂಗಳೂರು ಜೈಲಿನಲ್ಲಿ ದಿನಕರನ್ ಅವರಿಂದ ಮಾಹಿತಿ ಪಡೆದ ಶಶಿಕಲಾ ಪಕ್ಷದ ಹುದ್ದೆಯನ್ನು ತೊರೆಯಲಿದ್ದಾರೆ.

ಜಯಲಲಿತಾ ನಿಧನದ ಬಳಿಕ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾದರೂ, ಅವರನ್ನು ಕೆಳಗಿಳಿಸಿ, ಪಕ್ಷದ ಉನ್ನತ ಹುದ್ದೆಗೇರಿದ ಶಶಿಕಲಾ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರಾದರೂ, ಅದು ಕೋರ್ಟ್ ತೀರ್ಪಿನಿಂದಾಗಿ ಕೈಗೂಡಿರಲಿಲ್ಲ.

ಆದರೆ, ಅವರು ಆಯ್ಕೆ ಮಾಡಿದವರೇ ಸಿ.ಎಂ. ಹುದ್ದೆಗೇರಿದ್ದರು. ಜೈಲಿಗೆ ಹೋಗುವ ಮೊದಲು ಜಯಲಲಿತಾ ಸಮಾಧಿ ಬಳಿ ಶಪಥ ಮಾಡಿದ್ದ ಶಶಿಕಲಾ ಬೆಂಗಳೂರು ಜೈಲಿನಲ್ಲಿದ್ದಾರೆ.

ತಮಿಳುನಾಡಿನ ರಾಜಕೀಯ ಮಗ್ಗಲು ಬದಲಿಸಿದೆ. ಶಶಿಕಲಾ ಕುಟುಂಬದವರ ಹಸ್ತಕ್ಷೇಪವೇ ಅವರ ವಿರುದ್ಧ ಮುಖ್ಯಮಂತ್ರಿ, ಸಚಿವರು, ಶಾಸಕರು ತಿರುಗಿ ಬೀಳಲು ಕಾರಣವೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...