alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಗೆ ನೋಬೆಲ್ ಕೊಡಿ ಎಂದು ಶಿಫಾರಸ್ಸು ಮಾಡಲಿದ್ದಾರೆ ಬಿಜೆಪಿ ನಾಯಕಿ…!

ಪ್ರಧಾನಿ ನರೇಂದ್ರ ಮೋದಿಯವರಿಗೆ ನೋಬೆಲ್ ಶಾಂತಿ ಪ್ರಶಸ್ತಿ ಕೊಡಿ ಎಂದು ಶಿಫಾರಸ್ಸು ಮಾಡಲು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆ ತಮಿಳ್​ಸಾಯಿ ಸೌಂದರ್​ ರಾಜನ್​ ಹಾಗೂ ಆಕೆಯ ಪತಿ ಮುಂದಾಗಿದ್ದಾರೆ.

ದೇಶದ ಅತಿದೊಡ್ಡ ಆರೋಗ್ಯ ಸೇವಾ ಯೋಜನೆ ಆಯುಷ್ಮಾನ್​ ಭಾರತ್​ ಅನ್ನು ಮೋದಿ ಜಾರಿಗೆ ತಂದಿದ್ದಾರೆ. ಈ ಮೂಲಕ ನೋಬೆಲ್ ಗೆ ಅವರು ಅರ್ಹರಾಗಿದ್ದು, ದೇಶದ ನಾಗರಿಕರೂ ನನ್ನ ಈ ಅಭಿಯಾನಕ್ಕೆ ದನಿಗೂಡಿಸಬೇಕೆಂದು ಅವರು ಕೋರಿಕೊಂಡಿದ್ದಾರೆ.

ಈ ಬಗ್ಗೆ ತಮಿಳುನಾಡು ಬಿಜೆಪಿ ಘಟಕ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಈ ಅಂಶ ಪ್ರಸ್ತಾಪವಾಗಿದೆ. ತಮಿಳ್​ಸಾಯಿ ಅವರ ಪತಿ ಮೂತ್ರಪಿಂಡ ತಜ್ಞ ಪ್ರೊ. ಪಿ ಸೌಂದರ್​ರಾಜನ್ ಅವರೂ​ ಸಹ ಮೋದಿ ಹೆಸರನ್ನು ನೊಬೆಲ್​ ಶಾಂತಿ ಪುರಸ್ಕಾರಕ್ಕೆ ಹೆಸರಿಸಿದ್ದಾರೆ.

2019ನೇ ಸಾಲಿನ ನೊಬೆಲ್​ ಪ್ರಶಸ್ತಿಗೆ ಹೆಸರನ್ನು ಶಿಫಾರಸ್ಸು ಮಾಡಲು ಜನವರಿ 31 ಕೊನೆ ದಿನವಾಗಿದ್ದು, ಸಂಸದರು, ವಿಶ್ವವಿದ್ಯಾಲಗಳ ಪ್ರೊಫೆಸರ್ ಗಳು ಮೋದಿ ಹೆಸರನ್ನು ಪ್ರಸ್ತಾಪಿಸಬೇಕು ಎಂದವರು ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...