alex Certify
ಕನ್ನಡ ದುನಿಯಾ       Mobile App
       

Kannada Duniya

ವಧು ನಾಪತ್ತೆ, ತಮಿಳುನಾಡು ಶಾಸಕನ ಮದುವೆ ರದ್ದು

ವಧು ನಾಪತ್ತೆ ಆದ ಕಾರಣದಿಂದ ಇದೇ ಸೆಪ್ಟಂಬರ್ 12 ರಂದು ನಡೆಯಬೇಕಿದ್ದ ಎ.ಐ.ಎ.ಡಿ.ಎಂ.ಕೆ ಶಾಸಕ ಎಸ್. ಈಶ್ವರನ್ ಮದುವೆ ರದ್ದಾದ ಘಟನೆ ತಮಿಳುನಾಡಿನ ಈರೋಡ್ ನಲ್ಲಿ ನಡೆದಿದೆ.

ಭವಾನಿಸಾಗರ ಕ್ಷೇತ್ರದ ಎಂ.ಎಲ್.ಎ. ಈಶ್ವರನ್ (43) ಹಾಗೂ ಸಂಧ್ಯಾ (23) ಸೆಪ್ಟಂಬರ್ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದರು. ಉಕ್ಕರಂ ಬಳಿಯ ಗೊಬಿಚೆಟ್ಟಿಪಾಳಯಂದಲ್ಲಿ ಮದುವೆ ನಡೆಯಬೇಕಿತ್ತು.

ಮದುವೆಯ ಕಾರ್ಯಗಳು ಸಹ ಭರದಿಂದ ಸಾಗಿದ್ದವು. ಆದರೆ ವಧು ಶನಿವಾರದಂದು ನಾಪತ್ತೆಯಾಗಿದ್ದಾಳೆ. ಅಲ್ಲದೆ ಸಂಧ್ಯಾರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಕಾರಣದಿಂದ ಮದುವೆಯನ್ನು ರದ್ದು ಗೊಳಿಸಲಾಗಿದೆ.

ಶನಿವಾರ ಸಂಧ್ಯಾ ಸತ್ಯಮಂಗಲಂನಲ್ಲಿರುವ ಸಹೋದರಿಯ ಮನೆಗೆ ಹೋಗೋದಾಗಿ ತಾಯಿಗೆ ತಿಳಿಸಿದ್ದರು. ಆದ್ರೆ, ಸಹೋದರಿಯ ಮನೆಗೆ ಹೋಗಿಲ್ಲ ಎಂದು ಮಾಹಿತಿ ಸಿಕ್ಕಿದೆ. ಸಂಧ್ಯಾರ ತಾಯಿ ತಂಗಮಣಿಯಂ ಮಗಳು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತಮ್ಮ ಮಗಳು ವಿಜ್ಞೇಶ್ ಎಂಬವನನ್ನು ಪ್ರೀತಿಸುತ್ತಿದ್ದಳು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...