alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಧುವಾಗುತ್ತಂತೆ ಸೋಷಿಯಲ್ ಮೀಡಿಯಾ ಮೂಲಕ ನೀಡುವ ತಲಾಖ್

facebook-w

ನವದೆಹಲಿ: ಮುಸ್ಲಿಂ ಸಮುದಾಯದ ಕೆಲ ಹೆಣ್ಣುಮಕ್ಕಳು ‘ತಲಾಖ್’ ಪದ ಕೇಳಿದರೆ ಬೆಚ್ಚಿ ಬೀಳುವಂತಾಗಿದೆ. ಮೊದಲೆಲ್ಲಾ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆದು ಒಂದುಗೂಡಲು ಸಾಧ್ಯವಾಗದಿದ್ದಾಗ ತಲಾಖ್ ಹೇಳಲಾಗುತ್ತಿತ್ತು. ಆದರೆ ‘ತಲಾಖ್’  ಇದೀಗ ಹೊಸ ರೂಪ ಪಡೆದುಕೊಂಡಿದೆ.

ದೂರದಲ್ಲೆಲ್ಲೋ ಇರುವ ಪತಿ ನೆನಪಲ್ಲೇ ಆಕೆ ಕಾಲ ಕಳೆಯುತ್ತಿದ್ದರೆ, ಆತ ಅಲ್ಲಿಂದಲೇ ‘ತಲಾಖ್’ ಎಂದು ಇ-ಮೇಲ್, ವಾಟ್ಸಾಪ್ ಮೆಸೇಜ್ ಕಳಿಸುತ್ತಿದ್ದ. ಇಷ್ಟು ಮಾತ್ರಕ್ಕೆ ಸಂಬಂಧಕ್ಕೆ ಇತಿಶ್ರೀ ಹಾಡಲಾಗುತ್ತಿತ್ತು. ಇಂತಹ ಹಲವು ಪ್ರಕರಣಗಳು ನಡೆದು ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು. ಹಾಗಾಗಿ ಸುಪ್ರೀಂ ಕೋರ್ಟ್ ವಾಟ್ಸಾಪ್, ಎಸ್ಎಂಎಸ್ ಮೊದಲಾದವುಗಳ ಮೂಲಕ ‘ತಲಾಖ್’ ನೀಡುವುದನ್ನು ಪುನರ್ ಪರಿಶೀಲಿಸುವಂತೆ ಹೇಳುವ ಮೂಲಕ ಎಷ್ಟೋ ಹೆಣ್ಣುಮಕ್ಕಳ ಖುಷಿಗೆ ಕಾರಣವಾಗಿತ್ತು.

ಆದರೆ, ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಸಾಮಾಜಿಕ ಜಾಲತಾಣದ ಮೂಲಕವೂ ‘ತಲಾಖ್’ ಕೊಟ್ಟರೆ ಸಿಂಧುವಾಗುತ್ತದೆ ಎಂದು ಹೇಳಿದೆ. ಮಂಡಳಿಯ ವಕ್ತಾರ ಮಹಮ್ಮದ್ ಅಬ್ದುಲ್ ಖುರೇಶಿ ಅವರು, ಫೇಸ್ ಬುಕ್, ಎಸ್ಎಂಎಸ್, ವಾಟ್ಸಾಪ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿಯೂ ಪುರುಷರು ವಿಚ್ಛೇದನ ನೀಡಬಹುದಾಗಿದೆ ಎಂದು ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನೇ ಪ್ರಶ್ನಿಸುವಂತಹ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...