alex Certify
ಕನ್ನಡ ದುನಿಯಾ       Mobile App
       

Kannada Duniya

ತಾಜ್ ಮಹೋತ್ಸವದಲ್ಲಿ ರಾಮಲೀಲೆ, ಹೊಸ ವಿವಾದದಲ್ಲಿ ಯೋಗಿ ಸರ್ಕಾರ

ಉತ್ತರ ಪ್ರದೇಶದಲ್ಲಿ ಸರ್ಕಾರ ಬದಲಾವಣೆಯಾದಂತೆ ತಾಜ್ ಮಹೋತ್ಸವ ಕೂಡ ಬದಲಾಗುತ್ತಿದೆ. ಉತ್ಸವದಲ್ಲಿ ಮೊಘಲ್ ಸಂಸ್ಕೃತಿಯನ್ನು ಬಿಂಬಿಸಲಾಗುತ್ತಿತ್ತು. ಆದ್ರೆ ಈ ಬಾರಿ ರಾಮಲೀಲೆಯನ್ನು ಪ್ರದರ್ಶಿಸಲಾಗುತ್ತದೆ. ಇದು ವಿವಾದಕ್ಕೆ ಕಾರಣವಾಗಿದ್ದು, ತಾಜ್ ಮಹೋತ್ಸವದಲ್ಲಿ ಸರ್ಕಾರ ಕೇಸರಿಕರಣ ಮಾಡ್ತಿದೆ ಅನ್ನೋ ಆರೋಪ ಕೇಳಿಬಂದಿದೆ.

ಆಗ್ರಾದಲ್ಲಿ ಫೆಬ್ರವರಿ 18 ರಿಂದ 27ರವರೆಗೆ ತಾಜ್ ಮಹೋತ್ಸವ ನಡೆಯಲಿದೆ. ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಗವರ್ನರ್ ರಾಮ್ ನಾಯ್ಕ್ ಅವರನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಆದ್ರೆ ಇದು ಅತ್ಯಂತ ಉತ್ತಮ ನಿರ್ಧಾರ ಅಂತಾ ಬಿಜೆಪಿ ಶ್ಲಾಘಿಸಿದೆ.

ಆದ್ರೆ ತಾಜ್ ಮಹೋತ್ಸವದಲ್ಲಿ ರಾಮಲೀಲಾ ನೃತ್ಯದ ನಿರ್ಧಾರ ತಮ್ಮದಲ್ಲ, ತಾಜ್ ಮಹೋತ್ಸವ ಸಮಿತಿ ಉತ್ಸವದ ಥೀಮ್ ಅನ್ನು ನಿರ್ಧಾರ ಮಾಡುತ್ತದೆ ಅಂತಾ ಯೋಗಿ ಸರ್ಕಾರ ಹೇಳಿದೆ. ತಾಜ್ ಮಹಲ್ ಇತಿಹಾಸವನ್ನು ಅನಾವರಣ ಮಾಡದೇ ಇದ್ರೆ ತಾಜ್ ಮಹೋತ್ಸವ ಆಚರಿಸುವುದರಲ್ಲಿ ಅರ್ಥವೇ ಇಲ್ಲ ಅಂತಾ ವಿಪಕ್ಷಗಳು ಕಿಡಿಕಾರಿವೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...