alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿಗಳಿಗೆ ದುಬಾರಿಯಾಯ್ತು ಈ ಸ್ಥಳ

ಪ್ರೇಮ ಸೌಧವೆಂದೆ ಹೆಸರು ಪಡೆದಿರುವ ತಾಜ್ ಮಹಲ್ ವೀಕ್ಷಣೆ ದುಬಾರಿಯಾಗಿದೆ. ಪ್ರೇಮಿಗಳ ದಿನಕ್ಕಿಂತ ಒಂದು ದಿನ ಮೊದಲು ತಾಜ್ ಮಹಲ್ ಟಿಕೆಟ್ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಆಗ್ರಾದ ಭವ್ಯ ತಾಜ್ ಮಹಲ್ ವೀಕ್ಷಣೆಗೆ ತೆರಳುವ ಪ್ರವಾಸಿಗರ ಜೇಬಿಗೆ ಕತ್ತರಿ ಬೀಳಲಿದೆ.

ಈ ಹಿಂದೆ 40 ರೂಪಾಯಿಯಿದ್ದ ಟಿಕೆಟ್ ದರ 50 ರೂಪಾಯಿಯಾಗಿದೆ. ಹೊಸ ದರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. 50 ರೂಪಾಯಿ ಟಿಕೆಟ್ ಖರೀದಿ ಮಾಡಿದ ಪ್ರವಾಸಿಗರು ಕೇವಲ 3 ಗಂಟೆ ಮಾತ್ರ ತಾಜ್ ಮಹಲ್ ವೀಕ್ಷಣೆ ಮಾಡಬಹುದಾಗಿದೆ. ಮಂಗಳವಾರ ಕೇಂದ್ರ ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

ಪ್ರವೇಶ ಟಿಕೆಟ್ ಹೊರತುಪಡಿಸಿ ನೀವು ಸಮಾಧಿಯೊಳಗೆ ಹೋಗಲು ಬಯಸಿದ್ದರೆ ಹೆಚ್ಚುವರಿ 200 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಹೆಚ್ಚಿನ ಹಣಗಳಿಕೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿಲ್ಲ. ಪ್ರವಾಸಿಗರನ್ನು ನಿಯಂತ್ರಿಸಲು ಈ ಕ್ರಮವೆಂದು ಮಹೇಶ್ ಶರ್ಮಾ ಹೇಳಿದ್ದಾರೆ. ತಾಜ್ ಮಹಲ್ ಸುತ್ತಮುತ್ತ ತಿರುಗುವ ಟಿಕೆಟ್ ಬ್ರೋಕರ್ ಹಾವಳಿ ತಪ್ಪಿಸಲೂ ಸರ್ಕಾರ ಕ್ರಮಕೈಗೊಳ್ಳುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...